ಯಾದಗಿರಿ | ಶಿಕ್ಷಣವು ಬಾಳಿಗೆ ಬೆಳಕು ನೀಡುವ ದಾರಿದೀಪ : ಶಂಭುಲಿಂಗ ಸ್ವಾಮಿ
Update: 2024-12-09 15:27 GMT
ಯಾದಗಿರಿ : ಶಿಕ್ಷಣವು ವಿದ್ಯಾರ್ಥಿಗಳಿಗೆ ಬಾಳಿಗೆ ಬೆಳಕು ನೀಡುವ ದಾರಿದೀಪ ಎಂದು ಕೋಡ್ಲಾದ ಶ್ರೀ ಶಂಭುಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶಂಭುಲಿಂಗ ಸ್ವಾಮಿ ಹೇಳಿದ್ದಾರೆ.
ಸೈದಾಪುರ ಪಟ್ಟಣದ ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ʼಶಿಕ್ಷಣ ಜೀವನದ ಅವಿಭಾಜ್ಯ ಅಂಗʼ ಎಂಬ ವಿಷಯ ಕುರಿತು ಮಕ್ಕಳ ಜೊತೆಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಮಲ್ಲಿಕಾರ್ಜುನ, ಮರಿಲಿಂಗಮ್ಮ, ಆಸೀಫಾ, ಸಾನಿಯಾ ಸಮರೀನ್, ಸ್ವಾತಿ, ಹೃತಿಕಾ, ಆನಂದು ಕೃಷ್ಣಾ, ಶ್ರೀದೇವಿ ಹಾಗೂ ಶಿವಶರಣಪ್ಪ, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.