ಯಾದಗಿರಿ | ಪೇಜಾವರ ಮಠದ ಶ್ರೀ ವಿರುದ್ಧ ಕ್ರಮಕ್ಕೆ ಸಿ.ಎಂಗೆ ಮನವಿ

Update: 2024-12-04 14:08 GMT

ಸುರಪುರ : ಸಂವಿಧಾನದ ಕುರಿತು ಅವಮಾನಕರ ಹೇಳಿಕೆ ನೀಡಿರುವ ಉಡುಪಿ ಪೇಜಾವರ ಮಠದ ಶ್ರೀ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ)ಬೆಂಗಳೂರು, ಕಲಬುರಗಿ ರಾಜ್ಯ ಸಂಚಾಲಕರಾದ ಅರ್ಜುನ್ ಭದ್ರೆ ಮತ್ತು ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ ಕ್ರಾಂತಿ ರವರ ನೇತೃತ್ವದಲ್ಲಿ ಸುರಪುರ ತಾಲೂಕಿನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.

ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸದಲ್ಲಿ ಸಮಿತಿಯ ನಿಯೋಗ ಭೇಟಿಯಾಗಿ ಸಂವಿಧಾನ ವಿರೋಧಿ ಮಾತನಾಡಿದ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ಅವರ ವಿರುದ್ಧ ಕೇಸ್ ದಾಖಲಿಸಬೇಕೆಂದು ಮನವಿ ಪತ್ರ ಸಲ್ಲಿಸಿದ್ದರು.

ಸಂಘ ಪರಿವಾರದ ಕೆಲ ನಿಷ್ಠ ಮಠಾಧೀಶರು ಸಂವಿಧಾನದ ವಿರೋಧಿ, ಕೋಮುವಾದಿ ಸಂಘಟನೆಗಳು ನ.23 ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂತ ಸಮಾವೇಶದಲ್ಲಿ ಮಾತಾನಾಡಿದ ಸ್ವಾಮೀಜಿ, ಸ್ವತಂತ್ರ ಪೂರ್ವದಲ್ಲಿ ನಮ್ಮ ಭಾರತ ಹಿಂದೂ ರಾಷ್ಟ್ರವಾಗಿತ್ತು. ಈಗ ನಮಗೆ ಗೌರವಿಸುವ ಸಂವಿಧಾನ ಬರಬೇಕಾಗಿತ್ತು ಎಂದು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಪೇಜಾವರ ಸ್ವಾಮೀಜಿ ಬಹಿರಂಗ ಸಭೆಯಲ್ಲಿ ಈ ಸಂವಿಧಾನ ಹೋಗಿ ನಮಗೆ ಗೌರವಿಸುವ ಸಂವಿಧಾನ ಬರಬೇಕು ಎಂದು ಹೇಳಿರುವುದಕ್ಕೆ ಅರ್ಜುನ್ ಭದ್ರೆ ಖಂಡಿಸಿದರು.

ಸ್ವಾಮೀಜಿ ಅವರ ಬಗ್ಗೆ ಪರಿಶೀಲನೆ ಮಾಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕನ್ನ, ಅಜೀಜ್ ಐಕೂರ್, ಸೂರ್ಯಕಾಂತ್ ಅಜಾದ್ ಪುರ್, ಮಹೇಶ್ ಕೋಕಿಲೆ ವರವಿ, ವೀರಭದ್ರ ತಳವರಗೇರಾ, ಪರಶುರಾಮ್ ರಾಜಾಪುರ, ಬಸವರಾಜ್ ಬೊಮ್ಮನಹಳ್ಳಿ, ಮಲ್ಲಿಕಾರ್ಜುನ ತಳ್ಳಳ್ಳಿ ಕಾಳಿಂಗ ಕಲ್ಲದೇವನಹಳ್ಳಿ, ಹುಲಿಗೆಪ್ಪ ಬೈಲಕುಂಟೆ, ಮುತ್ತುರಾಜ್ ಹುಲಿಕೆರೆ, ಅಪ್ಪಾರಾಯ ಗವನಹಳ್ಳಿ ಇತರರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News