ಮಂಗಳೂರು: ಡಿ.12ರಂದು ಎಸ್. ಎಂ. ಎ.ನಿಂದ ವಕ್ಫ್ ಜಾಗೃತಿ ಸಮಾವೇಶ

Update: 2024-12-11 05:55 GMT

ಮಂಗಳೂರು: ಸುನ್ನಿ ಮ್ಯಾನೇಜ್ ಮೆಂಟ್ ಅಸೋಸಿಯೇಶನ್(ಎಸ್. ಎಂ. ಎ.) ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಡಿ.12ರಂದು ಬೆಳಗ್ಗೆ 10ರಿಂದ ಅಪರಾಹ್ನ 1ರ ತನಕ ಮಂಗಳೂರಿನ ಪುರಭವನದಲ್ಲಿ ವಕ್ಫ್ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಎಸ್. ಎಂ. ಎ. ರಾಜ್ಯಾಧ್ಯಕ್ಷ ಉಜಿರೆ ಸೈಯದ್ ಇಸ್ಮಾಯೀಲ್ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ದುಆ ಮೂಲಕ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮೌಲಾನ ಎನ್.ಕೆ. ಎಂ. ಶಾಫಿ ಸಅದಿ ನೆರವೇರಿಸುವರು. ಎಸ್. ಎಂ. ಎ. ರಾಜ್ಯ ಕೋಶಾಧಿಕಾರಿ ಹಮೀದ್ ಹಾಜಿ ಕೊಡುಂಗೈ ಪ್ರಾಸ್ತಾವಿಕವಾಗಿ ಮಾತನಾಡಲಿರುವರು.

ಪ್ರಸಕ್ತ ಸನ್ನಿವೇಶದಲ್ಲಿ ಮುಸ್ಲಿಮ್ ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಂಘಟನಾ ನಿಲುವನ್ನು ಡಾ. ಎಂ. ಎಸ್. ಎಂ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ವಕ್ಫ್ ಬಗ್ಗೆ ಸಾರ್ವಜನಿಕ ರಲ್ಲಿರುವ ಅಹವಾಲುಗಳ ಬಗ್ಗೆ ಮುಜೀಬುಲ್ಲಾ ಝಫಾರಿ, ಕಾನೂನು ಮಾಹಿತಿಗಾರ, ಖ್ಯಾತ ವಕೀಲ ದಿನೇಶ್ ಹೆಗಡೆ ಉಳೇಪಾಡಿ ವಕ್ಫ್ ಜಾಗೃತಿ ವಿಷಯದ ಕುರಿತು ಸವಿವರವಾಗಿ ಮಾತಾಡುವರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಮ್ ಜಮಾಅತ್ ರಾಜ್ಯಾಧ್ಯಕ್ಷ ಮೌಲಾನಾ ಕಾವಲ್ ಕಟ್ಟೆ ಹಝ್ರತ್, ಪ್ರಧಾನ ಕಾರ್ಯದರ್ಶಿ ಅಬೂ ಸುಫಿಯಾನ್ ಮದನಿ, ಯೆನೆಪೊಯ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ ಹಾಜಿ, ನಾಯಕರಾದ ಪಿ. ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ, ಎಸ್. ಪಿ. ಹಂಝ ಸಖಾಫಿ, ಎಸ್. ವೈ.ಎಸ್. ಅಧ್ಯಕ್ಷ ಹಫೀಳ್ ಸಅದಿ ಕೊಳಕೇರಿ, ಎಸ್. ಜೆ.ಎಂ. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಕೆ. ಎಂ. ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ಅಧ್ಯಕ್ಷ ಸುಫ್ಯಾನ್ ಸಖಾಫಿ, ಬಿ. ಎಂ. ಫಾರೂಕ್, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ, ಲಕ್ಕಿಸ್ಟಾರ್ ನಾಸಿರ್, ಎಸ್.ಎಂ.ಆರ್. ರಶೀದ್ ಹಾಜಿ, ಹೈಝಂ ಶಾಕಿರ್ ಹಾಜಿ, ಎಚ್. ಎಚ್. ಅಮೀನ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಎಸ್.ಎಂ.ಎ. ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News