ಡಿ. 7ರಂದು ಮುಂಬೈಯಲ್ಲಿ ವಿಶ್ವಬಂಟರ ಸಮಾಗಮ
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಮುಂಬೈ ಬಂಟರ ಸಂಘದ ಸಹಯೋಗದಲ್ಲಿ ಮುಂಬೈಯ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜಾಗತಿಕ ಮಟ್ಟದ "ವಿಶ್ವ ಬಂಟರ ಸಮಾಗಮ"ಬೃಹತ್ ಕಾರ್ಯಕ್ರಮ ಡಿ.7 ರಂದು ನಡೆಯಲಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ ತಿಳಿಸಿದ್ದಾರೆ.
ನಗರದ ಬಂಟರ ಯಾನೆ ನಾಡವರ ಮಾತೃ ಸಂಘದ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯ ನ್ನುದ್ದೇಶಿಸಿ ಮಾತನಾಡುತ್ತಾ, ಕಳೆದ ವರ್ಷ ಉಡುಪಿಯಲ್ಲಿ ಎರಡು ದಿನಗಳ ವಿಶ್ವಮಟ್ಟದ ಬಂಟ ಸಮ್ಮಿಲನವನ್ನು ಆಯೋಜಿಸಿ ಕೊಂಡಿದ್ದು ಸುಮಾರು 75 ಸಾವಿರಕ್ಕೆ ಮಿಕ್ಕಿ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಯಾಗಿ ನಡೆದಿದೆ. ಮಂಬೈ ನಗರದಲ್ಲಿ 3 ವರ್ಷಗಳ ಹಿಂದೆ ಒಕ್ಕೂಟದ ಬಂಟ ಸಮ್ಮಿಲನ ಯಶಸ್ವಿಯಾಗಿ ನಡೆದಿದೆ. ಈ ವರ್ಷ ಮುಂಬೈ ಮಹಾ ನಗರದಲ್ಲಿ ಜಾಗತಿಕ ಮಟ್ಟದ ಬಂಟ ಸಮಾಜದ ಬಂಧುಗಳನ್ನು ಒಟ್ಟು ಸೇರಿಸುವ ಮಹಾನ್ ಉದ್ದೇಶದೊಂದಿಗೆ ಡಿ.7ರಂದು ಕುರ್ಲಾಪೂರ್ವದ ಬಂಟರ ಭವನದಲ್ಲಿ "ವಿಶ್ವ ಬಂಟರ ಸಮಾಗಮ" ಜಾಗತಿಕ ಮಟ್ಟದ ಕಾರ್ಯಕ್ರಮ ಬೆಳಿಗ್ಗೆಯಿಂದ ಸಂಜೆವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮವನ್ನು ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ, ಮುಖ್ಯ ಅತಿಥಿಯಾಗಿ ಒಕ್ಕೂಟದ ವಿಶೇಷ ಮಹಾ ನಿರ್ದೇಶಕರ. ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಸಿಎಂಡಿ ತೋನ್ಸೆ ಆನಂದ ಎಮ್.ಶೆಟ್ಟಿ, ಮುಂಬೈ ಹೇರಂಭ ಇಂಡಸ್ಟ್ರೀಸ್ ನ ಅಧ್ಯಕ್ಷ, ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಪಾಲ್ಗೊಳ್ಳಲಿದ್ದು ಹಾಗೂ ಪ್ರತಿಷ್ಠಿತ ಉದ್ಯಮಿಗಳು ಸಮಾಜ ಸೇವಕರು ಜಗತ್ತಿನ ವಿವಿಧ ಬಂಟಸಂಘಗಳ ಅಧ್ಯಕ್ಷರು ಸೇರಿಕೊಳ್ಳಲಿದ್ದಾರೆ. ಸಂಜೆ ನಡೆಯಲಿರುವ ಸಮಾರೋಪ ಕಾರ್ಯಕ್ರಮವನ್ನು ಒಕ್ಕೂಟದ ಮಹಾದಾನಿ ಹೇರಂಬ ಇಂಡಸ್ಟ್ರೀಸ್‍ನ ಆಡಳಿತ ನಿರ್ದೇಶಕರಾದ ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಎಮ್ ಆರ್ ಜಿ ಗ್ರೂಪ್ ಆಡಳಿತ ನಿರ್ದೇಶಕ ಡಾ. ಕೆ ಪ್ರಕಾಶ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಹಾಗೂ ವಿಶ್ವದ ಬಂಟರ ಸಂಘಗಳ ನೂತನ ಅಧ್ಯಕ್ಷರುಗಳಿಗೆ ಸನ್ಮಾನ ನಡೆಯಲಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಮುಂಬೈ ಮಹಾನಗರದ ಬಂಟರ ಸಂಘಗಳಿಗೆ ನೃತ್ಯ ಸ್ಪರ್ಧೆ ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಕಾರ್ಯಕ್ರಮ ಹೊಸತನ ನೀಡುವಲ್ಲಿ ರೂಪರೇಷೆಯನ್ನು ತಯಾರಿಸಲಾಗಿದೆ. ವಿಶ್ವಬಂಟರ ಸಮಾಗಮದಲ್ಲಿ ಬಂಟ ಸಮಾಜದ ಪ್ರಮುಖರು ಭಾಗವಹಿಸಲಿದ್ದಾರೆ. ವಿಶ್ವದಾದ್ಯಂತ ಇರುವ ಬಂಟರ ಸಂಘಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಗುವುದು. ಸಿನಿಮಾ ತಾರೆಯರು, ಧಾರ್ಮಿಕ ಮುಖಂಡರು, ಉದ್ಯಮಿಗಳು, ರಾಜಕೀಯ ಮುಖಂಡರು, ಕೈಗಾರಿಕೋದ್ಯಮಿಗಳು, ಭಾಗವಹಿಸಲಿದ್ದಾರೆ.
ನೃತ್ಯ ಸ್ಪರ್ಧೆಯ ಜೊತೆಗೆ ಆದರ್ಶದಂಪತಿ, ಮಿಸ್ಟರ್ ಬಂಟ್, ಮಿಸ್ ಬಂಟ್ ಕಾರ್ಯಕ್ರಮವೂ ಇದೆ. ಬೆಳಿಗ್ಗೆ ಮಹಾಸಭೆ- ಅಧಿವೇಶನ ನಡೆಯಲಿದೆ. ಬೆಳಿಗ್ಗೆಯಿಂದ ರಾತ್ರಿವರೆಗೆ ನಡೆಯುವ ಕಾರ್ಯಕ್ರಮಾದಲ್ಲಿ ಸುಮಾರು 5 ಸಾವಿರಕ್ಕೂ ಮಿಕ್ಕಿದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬೆಳಿಗ್ಗೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪೂಜೆ ನಡೆದು ಬಳಿಕ ಮೆರವಣಿಗೆಯ ಮೂಲಕ ಗಣ್ಯರನ್ನು ಸಮಾರಂಭಕ್ಕೆ ಕರೆದೊಯ್ಯಲಾಗುವುದು.
ಈ ಅದ್ದೂರಿಯ ಬೃಹತ್ ಕಾರ್ಯಕ್ರಮದಲ್ಲಿ ಒಕ್ಕೂಟದ ವಿಶೇಷ ಮಹಾ ನಿರ್ದೇಶಕ ತೋನ್ಸೆ ಆನಂದ್ ಎಂ. ಶೆಟ್ಟಿ, ಮಹಾ ನಿರ್ದೇಶಕ ಡಾ. ಕೆ.ಪ್ರಕಾಶ್ ಶೆಟ್ಟಿ, ಮಹಾ-ನಿರ್ದೇಶಕ ಶಶಿಧರ್ ಶೆಟ್ಟಿ ಬರೋಡ, ಮಹಾ-ನಿರ್ದೇಶಕ ಕೆ. ಎಂ. ಶೆಟ್ಟಿ ವಿ. ಕೆ. ಗ್ರೂಪ್ಸ್, ನಿರ್ದೇಶಕ ಕೆ.ಡಿ ಶೆಟ್ಟಿ ಮಹಾ-ನಿರ್ದೇಶಕ ರಾಜೇಶ್ ಎನ್. ಶೆಟ್ಟಿ ರಾಕ್ಷೀ ಡೆವಲಪರ್ಸ್, ಮಹಾ-ನಿರ್ದೇಶಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ , ನಿರ್ದೇಶಕ ರವಿ ಶೆಟ್ಟಿ ಅಂಕಲೇಶ್ವರ, ಮಹಾ-ನಿರ್ದೇಶಕ ಅರವಿಂದ್ ಆನಂದ್ ಶೆಟ್ಟಿ , ಮಹಾ-ನಿರ್ದೇಶಕ ಅಶೋಕ್ ಎಸ್. ಶೆಟ್ಟಿ ಮೆರಿಟ್, ಮಹಾ-ನಿರ್ದೇಶಕ ರಾಜೇಂದ್ರ ವಿ. ಶೆಟ್ಟಿ ಪಂಜುರ್ಲಿ ಗ್ರೂಪ್ಸ್, ನಿರ್ದೇಶಕ ಕೆ. ಡಿ. ಶೆಟ್ಟಿ, ನಿರ್ದೇಶಕ ರಘುರಾಮ್ ಕೆ. ಶೆಟ್ಟಿ, ನಿರ್ದೇಶಕ ಶ್ರೀಮತಿ ಉಮಕೃಷ್ಣ ಶೆಟ್ಟಿ, ನಿರ್ದೇಶಕ ಡಾ. ಆರ್. ಕೆ. ಶೆಟ್ಟಿ, ನಿರ್ದೇಶಕ ರವಿನಾಥ್ ವಿ. ಶೆಟ್ಟಿ ಅಂಕಲೇಶ್ವರ್, ನಿರ್ದೇಶಕ ಶಿವಚಂದ್ರ ಶೆಟ್ಟಿ, ನಿರ್ದೇಶಕ ಮಹೇಶ್ ಎಸ್. ಶೆಟ್ಟಿ, ನಿರ್ದೇಶಕ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ, ನಿರ್ದೇಶಕ ಸಂತೋಷ್ ಶೆಟ್ಟಿ ಪುಣೆ, ನಿರ್ದೇಶಕ ರತ್ನಾಕರ್ ಎಂ. ಶೆಟ್ಟಿ ವಸೈ, ನಿರ್ದೇಶಕ ಶಶಿಧರ್ ಶೆಟ್ಟಿ ಇನ್ನಂಜೆ,ಮಾಜಿ ಸಂಸದ ಗೋಪಾಲ ಶೆಟ್ಟಿ, ಎಸ್ ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ ಎಂಎನ್ ರಾಜೇಂದ್ರ ಕುಮಾರ್, ಡಾ ಎ ಜೆ ಶೆಟ್ಟಿ, ಡಾ ಎ ಸದಾನಂದ ಶೆಟ್ಟಿ, ಡಾ ಎಂ ಮೋಹನ್ ಆಳ್ವ, ಪಟ್ಲ ಸತೀಶ ಶೆಟ್ಟಿ, ಮಹಾ ಪೋಷಕರು, ಪೋಷಕರು, ದಾನಿಗಳು, ಗೌರವಾನ್ವಿತ ಆಡಳಿತ ಮಂಡಳಿ ಸದಸ್ಯರು, ಹಾಗೂ ಕಾರ್ಯಕಾರಿ ಸಮಿತಿ ಸರ್ವ ಸದಸ್ಯರುಗಳು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ,ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ,ಜೊತೆ ಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿಉಪಸ್ಥಿತರಿದ್ದರು.