ಜ.2-5: ಅಲೋಶಿಯಸ್ ಕಾಲೇಜಿನಲ್ಲಿ ಕಾರ್ಯಾಗಾರ
Update: 2025-01-01 17:50 GMT
ಮಂಗಳೂರು, ಜ.1: ಸಂತ ಅಲೋಶಿಯಸ್ ಡೀಮ್ಡ್ ವಿಶ್ವವಿದ್ಯಾನಿಲಯದ ರಂಗ ಅಧ್ಯಯನ ಕೇಂದ್ರ ಹಾಗೂ ಖ್ಯಾತ ನಟ ಪ್ರಕಾಶ್ ರಾಜ್ ನೇತೃತ್ವದ ʼನಿರ್ದಿಗಂತ ’ ಜಂಟಿಯಾಗಿ ನಡೆಸುವ ’ ರಿದಂ’ ಕಾರ್ಯಾಗಾರವು ಜ.2ರಿಂದ 5ರವರೆಗೆ ನಡೆಯಲಿದೆ.
ಜ.2ರಂದು ಬೆಳಗ್ಗೆ 9ಕ್ಕೆ ಪ್ರಕಾಶ್ ರಾಜ್ ಅವರಿಂದ ಕಾರ್ಯಾಗಾರ ಉದ್ಘಾಟನೆಗೊಳ್ಳಲಿದೆ. ಪ್ರತೀ ದಿನ ಸಂಜೆ 6ರವರೆಗೆ ಕಾಲೇಜಿನ ಕ್ಯಾಂಪಸ್‌ನಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಕಾಂತ ಸ್ವಾಮಿ, ಅನುಶ್ ಶೆಟ್ಟಿ, ಮುನ್ನಾ ಮೈಸೂರು, ಕೃಷ್ಣ ಚೈತನ್ಯ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.