ಎಂಆರ್ಪಿಎಲ್ ನ 4ನೇ ಹಂತ ನಿರ್ವಸಿತರ ಕುಟುಂಬಗಳ ಉದ್ಯೋಗ-ಪುನರ್ವಸತಿ ಬೇಡಿಕೆ: ಡಿಸಿ ಅಧ್ಯಕ್ಷತೆಯಲ್ಲಿ ಸಭೆ

Update: 2024-07-16 10:07 GMT

ಮಂಗಳೂರು, ಜು.16: ಎಂಆರ್ ಪಿಎಲ್ 4ನೇ ಹಂತದ ಭೂ ನಿರ್ವಸಿತರಾಗಿರುವ ಕುತ್ತೆತೂರು, ಪೆರ್ಮುದೆ ಎಕ್ತಾರು ಗ್ರಾಮದ ನಿವಾಸಿಗಳಿಗೆ ಸಿಗಬೇಕಾದ ಪುನರ್ವಸತಿ ಹಾಗೂ ಉದ್ಯೋಗ ಮತ್ತಿತ್ತರ ಬೇಡಿಕೆಗಳ ಈಡೇರಿಸುವ ಕುರಿತಂತೆ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಯಿತು.

ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ ಕೋಟ್ಯಾನ್, ವಿಶೇಷ ಭೂಸ್ವಾದಿನಾಧಿಕಾರಿ, ಎಂಆರ್ಪಿಎಲ್ ಅಧಿಕಾರಿಗಳು ಮತ್ತು ಭೂ ನಿರ್ವಸಿತರ ಹಿತರಕ್ಷಣ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯ ಶಾಸಕರು ಮತ್ತು ದ.ಕ ಜಿಲ್ಲಾ ಸಂಸದರು ಮಾತನಾಡಿ, ಎಂಆರ್ ಪಿಎಲ್ ನ ವಿಸ್ತರಣೆಗಾಗಿ ಸ್ಥಳಿಯರು ಭೂಮಿಯನ್ನು ತ್ಯಾಗ ಮಾಡಿದ್ದು, ಅವರಿಗೆ ದೊರಕಬೇಕಾದ ಸವಲತ್ತುಗಳನ್ನು ಯಾವುದೇ ನಿಬಂಧನೆಗಳಿಲ್ಲದೆ ಒದಗಿಸಬೇಕು. ನಿರ್ವಸಿತ ಕುಟುಂಬಗಳಿಗೆ ಸೂಕ್ತ ಪುನರ್ವಸತಿ ಮತ್ತು ಉದ್ಯೋಗವನ್ನು ವಿಳಂಬ ಮಾಡದೆ ಒದಗಿಸಬೇಕು ಎಂದು ಆಗ್ರಹಿಸಿದರು.

ಸುದೀರ್ಘ ನಡೆದ ಸಭೆಯ ಬಳಿಕ ಜಿಲ್ಲಾಧಿಕಾರಿ ನಿರ್ದೇಶನದಂತೆ ಎಂಆರ್ಪಿಎಲ್ ಅಧಿಕಾರಿಗಳು ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದರು.

ಇವರಿಂದ ಹರ್ಷಗೊಂಡ ಭೂ ನಿರ್ವಸಿತರ ಹಿತರಕ್ಷಣಾ ಸಮಿತಿಯು ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಎಂಆರ್ಪಿಎಲ್ ನ 4ನೇ ಹಂತದಲ್ಲಿ ಭೂಮಿ ಕಳೆದುಕೊಂಡವರಿಗೆ ಉದ್ಯೋಗ ಹಾಗೂ ಪುನರ್ ವಸತಿಯ ಬೇಡಿಕೆಗೆ ಸ್ಪಂದಿಸಿದ ಸಂಸದರು, ಶಾಸಕರು, ದ.ಕ. ಜಿಲ್ಲಾಧಿಕಾರಿ ಹಾಗೂ ಎಂಆರ್ಪಿಎಲ್ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News