ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪ: ಇಬ್ಬರ ಬಂಧನ
Update: 2023-07-27 14:10 GMT
ಮಂಗಳೂರು, ಜು.27: ನಗರದ ಧಕ್ಕೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಸಬಾ ಬೆಂಗರೆಯ ಅಬ್ದುಲ್ ರಹೀಂ (43) ಮತ್ತು ಅಶ್ರಫ್ (47) ಎಂದು ಗುರುತಿಸಲಾಗಿದೆ.
ಜು.26ರಂದು ನಗರದ ಬಂದರು ಉತ್ತರ ಧಕ್ಕೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಬಳಿ ಆರೋಪಿಗಳು ಆಕ್ಟಿವ್ ಹೋಂಡಾ ಸ್ಕೂಟರ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಂದ 1.67ಲಕ್ಷ ರೂ. ಮೌಲ್ಯದ 3.378 ಕೆ.ಜಿ. ಗಾಂಜಾ, ತೂಕಮಾಪನ, ನಗದು 4940 ರೂ. ಹಾಗೂ 50 ಸಾವಿರ ರೂ. ಮೌಲ್ಯದ ಆಕ್ಟಿವಾ ಹೋಂಡಾ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.