ಗಾಂಜಾ ಸೇವನೆ ಆರೊಪ: ಯುವಕನ ಸೆರೆ
Update: 2023-09-27 16:10 GMT
ಮಂಗಳೂರು : ನಗರದ ಲೇಡಿಹಿಲ್ ವೃತ್ತದ ಬಳಿಯಿದ್ದ ಯೆಯ್ಯಾಡಿಯ ನಿತ್ಯಾನಂದ ಪ್ರಸಾದ್ (26) ಎಂಬಾತನನ್ನು ಗಾಂಜಾ ಸೇವನೆಯ ಆರೋಪದ ಮೇರೆಗೆ ಬರ್ಕೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಆರೋಪಿಯು ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು ತಕ್ಷಣ ವಶಕ್ಕೆ ಪಡೆದು ವಿಚಾರಿಸಿದಾಗ ಗಾಂಜಾ ಸೇವನೆ ಮಾಡಿರುವು ದಾಗಿ ಒಪ್ಪಿಕೊಂಡಿದ್ದ ಎನ್ನಲಾಗಿದೆ. ಬಳಿಕ ಯುವಕನ್ನು ಖಾಸಗಿ ಆಸ್ಪತ್ರೆಯ ವೈದ್ಯರ ಬಳಿ ವೈದ್ಯಕೀಯ ತಪಾಸಣೆ ಮಾಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.