ಬಂಟ್ವಾಳ: ರಾಜ್ಯಪಾಲರ ನಡೆಯನ್ನು ಖಂಡಿಸಿ ಪಾದಯಾತ್ರೆ, ಪ್ರತಿಭಟನೆ

Update: 2024-08-19 14:05 GMT

ಬಂಟ್ವಾಳ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆಯನ್ನು ಖಂಡಿಸಿ ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಪಾದಯಾತ್ರೆ ಹಾಗೂ ಪ್ರತಿಭಟನೆ ಸೋಮವಾರ ಬಿ.ಸಿ. ರೋಡಿನಲ್ಲಿ ನಡೆಯಿತು.

ಬಿ.ಸಿ.ರೋಡ್ - ಕೈಕಂಬ ಪೊಳಲಿ ದ್ವಾರದಿಂದ ಬಿ.ಸಿ.ರೋಡ್ ಮಿನಿ ವಿಧಾನಸೌಧ ತನಕ ಪಾದಯಾತ್ರೆಯ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಬಿ.ಸಿ.ರೋಡ್ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ರಮಾನಾಥ ರೈ ಸಭೆಯನ್ನುದ್ದೇಶಿಸಿ ಮಾತನಾಡಿ, ಬಿಜೆಪಿಯವರು ರಾಜ್ಯಪಾಲರ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರದ ಅಸ್ಥಿರತೆಗೆ ಷಡ್ಯಂತ್ರ ರೂಪಿಸಿದ್ದಾರೆ. ಇವರ ಕುತಂತ್ರವನ್ನು ಬಯಲಿಗೆಳೆಯಲು ನಾವು ಉಗ್ರ ಹೋರಾಟಕ್ಕೂ ಸಿದ್ದರಿದ್ದೇವೆ ಎಂದು ಎಚ್ಚರಿಸಿದ ಅವರು ಸದಾ ಭ್ರಷ್ಟಾಚಾರದಿಂದಲೇ ಮುಳುಗಿರುವ ಬಿಜೆಪಿಗರು ಆಧಾರರಹಿತ ಆರೋಪದ ಮೂಲಕ ಕುಟಿಲ ರಾಜಕೀಯ ಮಾಡುತ್ತಿರುವುದು ಅವರ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್ ಆರ್ ಪೂಜಾರಿ, ಜಿ.ಎ.ಬಾವ ಮಾತನಾಡಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಕೇಂದ್ರ ಸರಕಾರದ ವಿರುದ್ದ, ರಾಜ್ಯಪಾಲರಿಗೆ ಧಿಕ್ಕಾರ ಘೋಷಣೆ ಕೂಗಲಾಯಿತು. ರಾಜ್ಯಪಾಲರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಸದಸ್ಯರಾದ ಪಿಯೂಷ್ ಎಲ್. ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಕ್ಷ ಪ್ರಮುಖರಾದ ಅಶ್ವನಿ ಕುಮಾರ್ ರೈ, ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲ್ಯಾನ್, ಬಿ.ಎಂ.ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಜಯಂತಿ ವಿ.ಪೂಜಾರಿ, ಕೆ.ಪದ್ಮನಾಭ ರೈ, ಡಾ.ರಘು, ಶರೀಫ್ ಶಾಂತಿಅಂಗಡಿ, ಸಂಜೀವ ಪೂಜಾರಿ, ಹಸೈನಾರ್ ಶಾಂತಿ ಅಂಗಡಿ, ಜನಾರ್ದನ ಚೆಂಡ್ತಿಮಾರು, ಮುಹಮ್ಮದ್ ನಂದರಬೆಟ್ಟು, ವಾಸು ಪೂಜಾರಿ, ಲೋಲಾಕ್ಷ, ದೇವಿ ಪ್ರಸಾದ್ ಪೂಂಜಾ, ಅಲ್ಬರ್ಟ್ ಮಿನೇಜಸ್, ಮಧುಸೂದನ್, ಸಿದ್ದೀಕ್ ಸರವು, ಅರ್ಶದ್ ಸರವು, ರಝಾಕ್ ಕುಕ್ಕಾಜೆ, ಸಫ್ವಾನ್ ಸರವು, ಶ್ರೀಧರ್ ರೈ ನೆಟ್ಲಮುಡ್ನೂರು, ಸತೀಶ್ ಪೂಜಾರಿ ಕೊಪ್ಪರಿಗೆ, ಕುಶಲ ಎಂ. ಪೆರಾಜೆ, ಹೈಡಾ ಸುರೇಶ್ , ಲವೀನಾ ಮೊರಾಸ್, ಫೌಝಿಯಾ ಸಜಿಪ ಮೂಡ, ಇಬ್ರಾಹಿಂ ಕೈಲಾರ್, ಶಬಾನಾ ಕಾವಳಕಟ್ಟೆ, ಆಯಿಷಾ ಕಲ್ಲಡ್ಕ, ವೆಂಕಪ್ಪ ಪೂಜಾರಿ, ಬೇಬಿ ಕುಂದರ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್ ಮೊದಲಾದವರು ಭಾಗವಹಿಸಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News