ದಲಿತ ಕುಟುಂಬದ ಮನೆ ನಿರ್ಮಾಣದ ಸಹಾಯಧನ ಬಿಡುಗಡೆಗೆ ಡಿಎಚ್‌ಎಸ್ ಒತ್ತಾಯ
ಮಂಗಳೂರು: ದೇರೆಬೈಲ್ ಪಶ್ಚಿಮ ವಾರ್ಡಿನ ಉರ್ವಸ್ಟೋರ್ ಸುಂಕದಕಟ್ಟೆಯ ದಲಿತ ಕುಟುಂಬದ ಮನೆ ನಿರ್ಮಾಣದ ಸಹಾಯಧನ ತೀರಾ ವಿಳಂಬ ವಾಗಿದೆ. ಅದನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ದಲಿತ ಹಕ್ಕುಗಳ ಸಮಿತಿ (ಡಿಎಚ್‌ಎಸ್) ಮಂಗಳೂರು ನಗರ ಸಮಿತಿಯು ಮನಪಾದ ಆಯುಕ್ತರು ಹಾಗೂ ಮೇಯರ್‌ರನ್ನು ಒತ್ತಾಯಿಸಿದ್ದಾರೆ.
ಉರ್ವಸ್ಟೋರ್ ಸುಂಕದಕಟ್ಟೆ ಪ್ರದೇಶದ ದಲಿತ ಮಹಿಳೆಯ ಪಾಳುಬಿದ್ದ ಮನೆಯು ಕಳೆದ ವರ್ಷದ ಮಳೆಗಾಲಕ್ಕೆ ಕುಸಿದು ಬಿದ್ದಿವೆ. ಆ ಸಂದರ್ಭ ಮನಪಾ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಬಳಿಕ ಯಾವುದೇ ಸ್ಪಂದನ ಇಲ್ಲದಾಗ ಸ್ಥಳೀಯರ ಸಹಕಾರದಲ್ಲಿ ನೂತನ ಮನೆ ನಿರ್ಮಿಸಲು ವ್ಯವಸ್ಥೆ ಮಾಡಲಾಗಿ ಮನಪಾದ ಪ್ರಾಕೃತಿಕ ವಿಕೋಪದ ನಿಧಿಯಿಂದ ಎರಡು ಬಾರಿ ಹಣ ಸಿಕ್ಕಿವೆ. ೩ನೇ ಹಂತದ ಹಣಕ್ಕೆ ಸತಾಯಿಸಲಾಗುತ್ತಿದೆ ಎಂದು ಡಿಎಚ್‌ಎಸ್ ಆಪಾದಿಸಿದೆ.
ನಿಯೋಗದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್, ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ಪ್ರಶಾಂತ್ ಎಂಬಿ, ರಘುವೀರ್, ನಾಗೇಂದ್ರ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮನೋಜ್ ಕುಲಾಲ್, ಸುಕೇಶ್, ಪ್ರಶಾಂತ್ ಆಚಾರ್ಯ ನಿಯೋಗದಲ್ಲಿದ್ದರು.