ನಿರ್ವಸಿತರಿಗೆ ಉದ್ಯೋಗ : ಡಿ.1ರೊಳಗೆ ಪರಿಹರಿಸಲು ಗೈಲ್‌ಗೆ ಸೂಚನೆ

Update: 2023-11-08 14:36 GMT

ಮಂಗಳೂರು : ಯೋಜನೆಗಾಗಿ ಭೂಮಿ ಕಳೆದುಕೊಂಡ ನಿರ್ವಸಿತರಿಗೆ ಉದ್ಯೋಗ ನೀಡಿ ಮುಂದುವರಿಸುವ ಬಗ್ಗೆ ಡಿಸೆಂಬರ್ 1ರೊಳಗೆ ಕ್ರಮ ಕೈಗೊಳ್ಳುವಂತೆ ಗೈಲ್‌ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ಗೆ (ಹಿಂದಿನ ಜೆಬಿಎಫ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಸೂಚನೆ ನೀಡಲಾಗಿದೆ.

ಎಂಎಸ್‌ಇಝಡ್ ಯೋಜನೆಗಾಗಿ ಸ್ಥಳಾಂತರಗೊಂಡ ಕುಟುಂಬಗಳಿಗೆ ಉದ್ಯೋಗ ನೀಡುವ ಕುರಿತು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರ ನೇತೃತ್ವದಲ್ಲಿ ನಡೆದ ವರ್ಚುವೆಲ್ ಸಭೆಯಲ್ಲಿ ಈ ಬಗ್ಗೆ ನಿರ್ದೇಶಿಸಲಾಗಿದೆ.

ಗೈಲ್ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಜಿಎಂಪಿಎಲ್)ನಲ್ಲಿ ನಿರ್ವಸಿತರಿಗೆ ಉದ್ಯೋಗದ ಮುಂದುವರಿಕೆಯ ಬಗ್ಗೆ ಸಭೆಯಲ್ಲಿ ವಿಸ್ಕೃತವಾಗಿ ಚರ್ಚಿಸಿತು, ನಿರ್ವಸಿತರಿಗೆ ಉದ್ಯೋಗ ನೀಡುವುದು ಜಿಎಂಪಿಎಲ್ ಸಂಸ್ಥೆಯ ಬಾಧ್ಯತೆ ಯಾಗಿದೆ. ಭೂಸ್ವಾಧೀನ ಸಂದರ್ಭದಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಯೋಜನೆಯಲ್ಲಿ ಉದ್ಯೋಗ ನೀಡುವ ಬಗ್ಗೆ ಕರ್ನಾಟಕ ಸರಕಾರವು ಭರವಸೆ ನೀಡಿತ್ತು. ನೇಮಕಾತಿ ನಿಯಮಗಳನ್ನು ಮುಂದಿಟ್ಟು ಉದ್ಯೋಗ ನಿರಾಕರಿಸುವುದು ಸರಿಯಲ್ಲ. ಎಂಆರ್‌ಪಿಎಲ್ ಮತ್ತು ಐಎಸ್‌ಪಿಆರ್‌ಎಲ್‌ನಂತಹ ಸಾರ್ವಜನಿಕ ಉದ್ಯಮಗಳು ಯಾವುದೇ ಆಯ್ಕೆ ಮಾನ ದಂಡಗಳಿಲ್ಲದೆ ನಿರ್ವಸಿತರಿಗೆ ಉದ್ಯೋಗ ನೀಡಿವೆ.ಇದೇಆಧಾರದಲ್ಲಿ ನಿರ್ವಸಿತರ ಉದ್ಯೋಗ ಸಮಸ್ಯೆ ಬಗೆಹರಿಸಲು ಸಭೆಗೈಲ್ ಅಧಿಕಾರಿಗಳಿಗೆ ಸೂಚಿಸಿತು.ಡಿಸೆಂಬರ್ ಒಂದರೊಳಗೆ ಉದ್ಯೋಗ ಸಮಸ್ಯೆಯನ್ನು ಪರಿಹರಿಸಲು ಸಮಯವನ್ನು ನೀಡಲಾಯಿತು.

ಸಭೆಯಲ್ಲಿ ಲೋಕಸಭಾ ಸದಸ್ಯನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ಕೆ ಅತೀಕ್, ಎಂಎಸ್‌ಇಝಡ್ ಅಭಿವೃದ್ಧಿ ಆಯುಕ್ತೆ ಹೇಮಲತಾ.ಪಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ,ಜಿಎಂಪಿಎಲ್ ಹಾಗೂ ಎಂಎಸ್‌ಇಝಡ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಳು, ಕೆಐಎಡಿಬಿ ಅಧಿಕಾರಿಗಳು, ನಿರ್ವಸಿತರ ಪ್ರತಿನಿಧಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News