ಕಾಪು : ಎಟಿಎಂ ಅಪ್ಡೇಟ್ ಮೆಸೇಜ್ ಕಳುಹಿಸಿ ವಂಚನೆ; ಪ್ರಕರಣ ದಾಖಲು
ಕಾಪು : ಬ್ಯಾಂಕ್‍ನ ಎಟಿಎಂ ಅಪ್ಡೇಟ್ ಮಾಡಿಕೊಳ್ಳುವುದಾಗಿ ಹೇಳಿಕೊಂಡು ಬಂದ ಮಸೇಜ್‍ನಿಂದ ಮಹಿಳೆಯೋರ್ವರು 3.38 ಲಕ್ಷ ರೂ. ಕಳೆದುಕೊಂಡ ಘಟನೆಯ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಲೆರಿಯನ್ ಎಂಬವರು ಶಂಕರಪುರದಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದರು. ಸೆಪ್ಟಂಬರ್ 23ರಂದು 12.30ರ ಗಂಟೆಗೆ ಅಪರಿಚಿತ ವ್ಯಕ್ತಿಯೋರ್ವರ 9387666481 ಮೊಬೈಲ್ ಸಂಖ್ಯೆಯಿಂದ ಹೆಂಡತಿಯ ಮೊಬೈಲ್ ನಂಬ್ರಕ್ಕೆ ಮೆಸೇಜ್ ಮಾಡಿ ತಾನು ಬ್ಯಾಂಕ್ ಉದ್ಯೋಗಿಯಾದ್ದು, ನಿಮ್ಮ ಖಾತೆಯ ಎಟಿಎಂ ಅಪ್ಡೇಟ್ ಮಾಡಿಕೊಳ್ಳುವಂತೆ ತಿಳಿಸಿದ್ದರು. ಅದರಂತೆ ಹೆಂಡತಿಯು ಪಾಸ್ ಬುಕ್ ವಿವರವನ್ನು ನೀಡಿದ್ದರು. ಬಳಿಕ ಆ ವ್ಯಕ್ತಿಯು ಅಕೌಂಟ್‍ಗೆ ನಾಮಿನಿಯಾಗಿರುವ ಖಾತೆದಾರರ ವಿವರವನ್ನು ಕೂಡಾ ಅಪ್ಡೇಟ್ ಮಾಡಲು ಇದೆ. ವಿವರವನ್ನು ಓದಗಿಸುವಂತೆ ತಿಳಿಸಿದ್ದರು. ಅವರ ತಿಳಿಸಿದ ಮೇರೆಗೆ ತನ್ನ ಎಟಿಎಂ ಕಾರ್ಡ್ ವಿವರವನ್ನುನೀಡಿದ್ದರು. ಸ್ವಲ್ಪ ಸಮಯದ ನಂತರ ಮೊಬೈಲ್‍ಗೆ ಬಂದಿರುವ ಒಟಿಪಿಯನ್ನು ವಿವರವನ್ನು ಆ ವ್ಯಕ್ತಿಗೆ ನೀಡಿದ್ದರು. ಆ ಬಳಿಕ ಅವರ ಅಕೌಂಟ್‍ನಿಂದ 1,99,999/-, 50,000/-, 80,000/- 8200/- ಒಟ್ಟು 3,38,199/- ರೂಪಾಯಿ ಹಣ ಕಡಿತವಾಗಿದೆ. ಆರೋಪಿತನು ಮೋಸದಿಂದ ಬ್ಯಾಂಕ್ ಖಾತೆಯ ವಿವರವನ್ನು ಪಡೆದುಕೊಂಡು ಅಕೌಂಟ್‍ನಲ್ಲಿದ್ದ ಒಟ್ಟು 3,38,199/- ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕಳೆದ ವಾರವೂ ಪಡುಬಿದ್ರಿ ಠಾಣಾ ವ್ಯಾಪ್ತಿಯ ಎರ್ಮಾಳಿನಲ್ಲೂ ಇಂತಹದೇ ಘಟನೆ ನಡೆದಿದ್ದು, ಈ ಬಗ್ಗ ಎಚ್ಚರದಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.