ಕುದ್ರೋಳಿ ಕ್ಷೇತ್ರಕ್ಕೆ ಸಂತ ಮದರ್ ತೆರೇಸಾ ವಿಚಾರ ವೇದಿಕೆಯಿಂದ ಸೌಹಾರ್ದ ಭೇಟಿ

ಮಂಗಳೂರು : ಮಂಗಳೂರು ದಸರಾದ ಸೌಹಾರ್ದ ತಾಣ ಶ್ರೀ ಕ್ಷೇತ್ರ ಕುದ್ರೋಳಿಗೆ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ನೇತೃತ್ವದ ತಂಡವು ಸೌಹಾರ್ದ ಭೇಟಿ ನೀಡಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪೂಜೆ ಪುನಸ್ಕಾರ ಹಾಗೂ ಕಾರ್ಯಕ್ರಮಗಳನ್ನು ವೀಕ್ಷಿಸಿದರು.
ಬಳಿಕ ಮಾತನಾಡಿದ ಅವರು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಶ್ವ ಮಾನವ ಸಂದೇಶ ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಹಸ್ತದಿಂದ ಪ್ರತಿಷ್ಠಾಪನೆಗೊಂಡ ಶ್ರೀ ಗೋಕರ್ಣಾನಾಥ ಕ್ಷೇತ್ರವು ಸರ್ವ ಧರ್ಮದ ಜನ ತೆಯ ಪ್ರೀತಿ ವಿಶ್ವಾಸಗಳಿಸುವ ಮೂಲಕ ಸೌಹಾರ್ದತೆಯ ತಾಣವಾಗಿ ಜಗತ್ಪ್ರಸಿದ್ದಗೊಂಡಿದೆ. ನಾಡ ಹಬ್ಬವಾದ ದಸರಾದ ಇಲ್ಲಿನ ವೈಭವವು ಎಲ್ಲರ ಕಣ್ಮಣ ಸೆಳೆಯುತ್ತಿದೆ. ಮಂಗಳೂರು ದಸರಾ ಕೂಡ ಜಾಗತಿಕ ಮನ್ನಣೆ ಪಡೆದಿದೆ ಎಂದರು.
ಈ ಸಂದರ್ಭ ಕ್ಷೇತ್ರಾಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಮಂಡಳಿ ಸದಸ್ಯರಾದ ರವಿಶಂಕರ್ ಮಿಜಾರ್, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಮುಖರಾದ ಸುನಿಲ್ ಕುಮಾರ್ ಬಜಾಲ್, ಮಂಜುಳಾ ನಾಯಕ್, ಅಶ್ರಫ್ ಕೆ, ಡೋಲ್ಫಿ ಡಿಸೋಜ, ಮಹೇಶ್ ನಾಯಕ್, ಮರ್ಲಿನ್ ರೇಗೋ, ಫ್ಲೇವಿ ಕ್ರಾಸ್ತಾ, ಡಯಾನ ಡಿಸೋಜ, ಫ್ಲೋರಿನ್ ಡಿಸೋಜ, ಸಂಜನಾ ಛಲವಾದಿ, ಸಮರ್ಥ್ ಭಟ್, ಸ್ಟಾನಿ ಡಿಕುನ್ಹಾ ಬಂಟ್ವಾಳ, ಸಿಲ್ವಿಯಾ ಸಿಕ್ವೇರಾ ಉಪಸ್ಥಿತರಿದ್ದರು.