ಫೆ. 7ರಿಂದ ಹಳೆಯಂಗಡಿ ಕದಿಕೆ ಉರೂಸ್
ಮುಲ್ಕಿ, ನ.6: ಇತಿಹಾಸ ಪ್ರಸಿದ್ದ ಹಳೆಯಂಗಡಿ ಕದಿಕೆ ಹಝ್ರತ್ ಸೈಯ್ಯದ್ ಮೌಲಾನಾ ವಲಿಯುಲ್ಲಾ ಅವರ ಉರೂಸ್ ಸಮಾರಂಭವು 2024ರ ಫೆ.7ರಿಂದ ಫೆ.10ರ ವರೆಗೆ ನಡೆಯಲಿದೆ.
ಈ ಸಂಬಂಧ ಹಳೆಯಂಗಡಿ ಕದಿಕೆ ದರ್ಗಾ ಶರೀಫ್ ನಲ್ಲಿ ಭಾನುವಾರ ಕೇಂದ್ರ ಜುಮಾ ಮಸೀದಿ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಕುಡುಂಬೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಉರೂಸ್ ಸಮಿತಿಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಇದೇ ಸಂದರ್ಭ ಉರೂಸ್ ಸಮಿತಿಯ ರಚನೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಜಮಾಲುದ್ದೀನ್ ಕದಿಕೆ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಪಲ್ಲಿಗುಡ್ಡೆ ಕದಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಜೊತೆ ಕಾರ್ಯದರ್ಶಿಗಳಾಗಿ ಫಕ್ರುದ್ದೀನ್ ಕದಿಕೆ, ಇಲ್ಯಾಸ್ ಕಜಕತೋಟ, ಖಜಾಂಚಿಯಾಗಿ ಫಾರೂಕ್ ಜಾಫರ್ ಸಾಗ್, ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕೆ. ಸಾಹುಲ್ ಹಮೀದ್ ಕದಿಕೆ, ಉಪಾಧ್ಯಕ್ಷರಾಗಿ ಅಶ್ರಫ್ ಪಡುತೋಟ ಆಯ್ಕೆಯಾಗಿದ್ದಾರೆ.
ಸಮಿತಿಯ ಸದಸ್ಯರಾಗಿ ಎಚ್.ಎ. ಮುಹಮ್ಮದ್ ಕದಿಕೆ, ಅಬ್ದುಲ್ ಖಾದರ್ ಕಜಕತೋಟ ಸಾಗ್, ಬಶೀರ್ ಹಾಜಿ ಕಲ್ಲಾಪು, ಎಚ್.ಎಂ. ಮುಸ್ತಫಾ ಸಾಗ್, ಶಮೀಮ್ ಬೊಟ್ಟು, ಅಬ್ದುಲ್ ಖಾದರ್ ಸಾಗ್, ಅಕ್ಬರ್ ಸಾಗ್, ಎಚ್.ಎಂ. ಬಶೀರ್‌ಸಾಗ್, ಅಬ್ದುಲ್ ರಝಾಕ್ ಕದಿಕೆ, ಇಬ್ರಾಹೀಂ ಇಂದಿರಾನಗರ, ಅಬ್ದುಲ್ ಹಮೀದ್ ಪಲ್ಲಿಗುಡ್ಡೆ, ಶೇಕ್ ಮುಹಮ್ಮದ್ ಕಾಪು, ಅಬ್ದುಲ್ ರಝಾಕ್ ಕಜಕತೋಟ, ರಿಯಾಝ್ ಕಲ್ಲಾಪು, ಅಬ್ದುಲ್ ಖಾದರ್ ಕಜಕತೋಟ, ಹನೀಫ್ ಇಂದಿರಾನಗರ, ಅಬ್ದುಲ್ ರಝಾಕ್ ಬೊಟ್ಟು, ಸಿದ್ದೀಕ್ ಕದಿಕೆ, ಉಸ್ಮಾನ್ ಸಾಗ್, ನಿಹಾಲ್ ಕದಿಕೆ, ಅಶ್ರಫ್ ಪಂಡಿತ್ ಹೌಸ್ ಸಾಗ್, ಇಸ್ಮಾಯೀಲ್ ಕದಿಕೆ, ಸಿದ್ದೀಕ್ ಕದಿಕೆ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಗೆ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ಲಾ ಝೈನಿ ಬಡಗನ್ನೂರು ದುವಾ ನೆರವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಈ ಸಂದರ್ಭ ಜಮಾಅತ್ ಬಾಂಧವರು ಉಪಸ್ಥಿತರಿದ್ದರು.