ಆರೋಗ್ಯ ವಿವಿ ಪ್ರಾದೇಶಿಕ ಕೇಂದ್ರ: ಮೇರಿಹಿಲ್‌ನಲ್ಲಿ ಸಚಿವರಿಂದ ಸ್ಥಳ ಪರಿಶೀಲನೆ

Update: 2023-09-08 15:04 GMT

ಮಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿವಿ ಪ್ರಾದೇಶಿಕ ಕೇಂದ್ರದ ನಿರ್ಮಾಣಕ್ಕೆ ಕಾಮಗಾರಿ ಟೆಂಡರ್ ಶೀಘ್ರವೇ ಕರೆದು ಆರಂಭಿಸಲು ಆದೇಶಿಸುವುದಾಗಿ ರಾಜ್ಯ ವೈದ್ಯಕೀಯ, ಕೌಶಲಾಭಿವೃದ್ಧಿ,ಉದ್ಯಮಶೀಲತಾ ಇಲಾಖೆಯ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಹೇಳಿದರು.

ನಗರದ ಮೇರಿಹಿಲ್‌ಲ್ಲಿ ವಿವಿ ಪ್ರಾದೇಶಿಕ ಕೇಂದ್ರದ ಸ್ಥಾಪನೆಗೆ ಕಾದಿರಿಸಲಾದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಎರಡು ವರ್ಷದ ಹಿಂದೆಯೇ ಈ ಜಾಗವನ್ನು ಕಾದಿರಿಸಲಾಗಿದೆ. 40 ಕೋ.ರೂ. ವೆಚ್ಚದ ಯೋಜನೆ ಇದಾಗಿದೆ. ಈ ಕೇಂದ್ರ ದಿಂದ ದ.ಕ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರಯೋಜವಾಗಲಿದೆ. ಪ್ರಾದೇಶಿಕ ಕೇಂದ್ರದ ಜೊತೆ ಕೌಶಲಾಭಿವೃದ್ಧಿ ಕೇಂದ್ರ, ಸ್ಪೋರ್ಟ್ಸ್ ಸೆಂಟರ್ ಸಹಿತ ಹಲವು ಸೌಲಭ್ಯವಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ತಿಳಿಸಿದರು.

ಈ ಸಂದರ್ಭ ಆರೋಗ್ಯ ವಿವಿಯ ಕುಲಪತಿ ಡಾ.ರಮೇಶ್ ಎಂ.ಕೆ., ಆರೋಗ್ಯ ವಿವಿಯ ಸೆನೆಟ್ ಸದಸ್ಯ ಡಾ.ಶಿವಶರಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News