ಕೆಎಇ ಪರೀಕ್ಷೆಗೆ ಹಿಜಾಬ್ ಗೆ ಅವಕಾಶ ಸ್ವಾಗತಾರ್ಹ: ಎಸ್ಸೆಸ್ಸೆಫ್
Update: 2023-10-20 10:30 GMT
ಮಂಗಳೂರು: ಅಕ್ಟೋಬರ್ 28 ಮತ್ತು 29 ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗೆ ನಡೆಯಲಿರುವ ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಎಇ) ಅನುಮತಿ ನೀಡಿರುವುದನ್ನು ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಸ್ವಾಗತಿಸಿದೆ.
ಹಿಜಾಬ್ ಧರಿಸುವುದರಿಂದ ಇತರ ಯಾವುದೇ ಧರ್ಮೀಯರ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ. ಹಿಜಾಬ್ ನಿಂದಾಗಿ ಉಚ್ಚನೀಚ ತಾರತಮ್ಯ ಸೃಷ್ಟಿಯಾಗುವುದಿಲ್ಲವಾದ್ದರಿಂದ; ಸಮಾನತೆಯ ಪರಿಕಲ್ಪನೆಗೂ ಹಿಜಾಬ್ ನಿಂದ ಅಡ್ಡಿಯಾಗುವುದಿಲ್ಲ. ಆದುದರಿಂದ ಸಮವಸ್ತ್ರದ ಬಣ್ಣದ ಹಿಜಾಬ್ ಗೆ ಶಾಲಾ ಕಾಲೇಜುಗಳಲ್ಲಿಯೂ ಅವಕಾಶ ಒದಗಿಸುವ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸುಫ್ಯಾನ್ ಸಖಾಫಿ ಪತ್ರಿಕಾಪ್ರಕಟನೆಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ.