ಮಂಗಳೂರು | ಶೀಘ್ರವೇ ಹಾರ್ನ್ ಫ್ರೀ (ನಿಶಬ್ಧ ವಲಯ) ರೆನ್ ಗುರುತು: ಅನುಪಮ್ ಅಗರ್ವಾಲ್
ಮಂಗಳೂರು, ನ. 11:ನಗರದ ವೆನ್ಲಾಕ್, ಲೇಡಿಗೋಷನ್ ಸೇರಿದಂತೆ ಆಸ್ಪತ್ರೆ, ಶಾಲಾ ಕಾಲೇಜು ಹಾಗೂ ವಸತಿ ಪ್ರದೇಶಗಳನ್ನು ಗುರುತಿಸಿಕೊಂಡು 10ರಿಂದ 15ಕಡೆಗಳಲ್ಲಿ ‘ಹಾರ್ನ್ ಫ್ರೀ ರೆನ್’ (ನಿಶಬ್ಧ ವಲಯ) ಆಗಿ ಘೋಷಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಭರವಸೆ ನೀಡಿದರು.ನಗರದ ಕಮಿಷನರ್ ಕಚೇರಿಯಲ್ಲಿ ಶನಿವಾರ ನಡೆದ ಪೊಲೀಸ್-ೆನ್ ಇನ್ ಕಾರ್ಯಕ್ರಮದಲ್ಲಿ ನಾಗರಿಕರೊಬ್ಬರಿಂದ ಕರ್ಕಶ ಹಾರ್ನ್‌ಗಳ ಬಗ್ಗೆ ಬಂದ ದೂರಿಗೆ ಸ್ಪಂದಿಸಿ ಅವರು ಮಾತನಾಡಿದರು.ಹಂಪನಕಟ್ಟೆಯ ಲೇಡಿಗೋಷನ್ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ‘ಹಾರ್ನ್ ಫ್ರೀ ರೆನ್’ ಜಾರಿ ಮಾಡಲಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ನಗರದಲ್ಲಿ ಅನಗತ್ಯವಾಗಿ, ಕರ್ಕಶವಾಗಿ ಹಾರ್ನ್ ಹಾಕಿದವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು. ನಗರದ ಕೆಲವೊಂದು ಪ್ರದೇಶಗಳನ್ನು ಆಯ್ಕೆ ಮಾಡಿ ಅಗತ್ಯತೆ ಹಿನ್ನಲೆಯಲ್ಲಿ ಹಾರ್ನ್ ಫ್ರೀ ರೆನ್ ವಲಯ ಎಂದು ಘೋಷಿಸಲಾಗುವುದು ಎಂದರು.ನಗರದ ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ಕೆಲವೊಂದು ಏಜೆನ್ಸಿಗಳು ಹಾಲಿ ಡೇ ಪ್ಯಾಕೇಜ್ ಎಂದು ಸದಸ್ಯತ್ವ ಮಾಡಿ ಹಣ ವಂಚನೆ ಮಾಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸುನೀಲ್ ಕುಮಾರ್ ಕದ್ರಿ ಆರೋಪಿಸಿದರು.ಇದಕ್ಕೆ ಕಮಿಷನರ್ ಉತ್ತರಿಸಿ, ಈ ರೀತಿಯ ಹೊಟೇಲ್‌ಗಳನ್ನು ಪತ್ತೆಹಚ್ಚಿ ಅವರಿಗೆ ಕಡಕ್ ಸೂಚನೆ ನೀಡಬೇಕು ಎಂದರು.ನಗರದ ಹಲವೆಡೆ ಬಸ್ ತಂಗುದಾಣದಲ್ಲಿ ಬಸ್‌ಗಳನ್ನು ನಿಲ್ಲಿಸದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿನ ಹಿನ್ನಲೆಯಲ್ಲಿ ಇದಕ್ಕೆ ಕೂಡಲೇ ಸ್ಪಂದಿಸಿದ ಕಮಿಷನರ್ ಸಂಬಂಧಪಟ್ಟ ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸಲಹೆ ನೀಡಿದರು.ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲು ನಿಲ್ದಾಣದಲ್ಲಿರುವ ರಿಕ್ಷಾ ಚಾಲಕರು ಪ್ರೀಪೇಯ್ಡಾಗಿಂತ ಹೆಚ್ಚಿನ ದರ ತೆಗೆದುಕೊಳ್ಳುತ್ತಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಕಮಿಷನರ್ ಹೇಳಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ವ್ಯಕ್ತವಾದ ಸಮಸ್ಯೆಗಳು:
ಅತ್ತಾವರ ಹೊಟೇಲ್‌ವೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.
ಬಂಗ್ರಕುಳೂರು-ಕುಳೂರು ವ್ಯಾಪ್ತಿಯ ಯೆನಪೋಯ ಕಾಲೇಜು ಬಳಿ ವೇಗ ನಿಯಂತ್ರಕ ಹಂಪ್ಸ್‌ಗಳನ್ನು ಹಾಕಬೇಕು.
ಕ್ಲಾಕ್ ಟವರ್ ಬಳಿ ಭಿಕ್ಷುಕರು, ಲಿಂಗತ್ವ ಅಲ್ಪಸಂಖ್ಯಾತರಿಂದ ತೊಂದರೆ ಉಂಟಾಗುತ್ತಿದೆ.
ನಗರದ ಕುಂಟಿಕಾನ ಹುಂಡೈ ಶೋರೂಂ ಬಳಿ ರಸ್ತೆ ಬದಿಯೇ ಸಾಲು ಸಾಲು ವಾಹನ ಪಾರ್ಕ್ ಮಾಡುವ ಕಾರಣ ರಸ್ತೆಯ ಸಾಗುವ ವಾಹನಗಳಿಗೆ ತೊಂದರೆಯಾಗುತ್ತಿದೆ.
ನಗರದ ಲೇಡಿಗೋಷನ್, ಹಂಪನಕಟ್ಟೆ ಬಳಿಫುಟ್‌ಪಾತ್‌ನಲ್ಲೇ ವ್ಯಾಪಾರ ಮಾಡುವ ಕಾರಣ ಪಾದಚಾರಿಗಳಿಗೆ ತೊಂದರೆ.
ವಿ.ಟಿ. ರೋಡ್‌ನಿಂದ ಮಂಜೇಶ್ವರ ಗೋವಿಂದ ಪೈ ಸರ್ಕಲ್ ಬರುವ ರಸ್ತೆಯಲ್ಲಿ ಕರ್ಣಾಟಕ ಬ್ಯಾಂಕ್ ಎದುರು ಬಸ್‌ಗೆ ಕಾಯುವುದರಿಂದ ಉಳಿದ ವಾಹನಕ್ಕೆ ತೊಂದರೆ. ಬಸ್ ನಿಲುಗಡೆ ಪ್ರದೇಶ ಶಿಪ್ಟ್‌ಗೆ ಆಗ್ರಹ.
ಬಂಟ್ಸ್‌ಹಾಸ್ಟೆಲ್‌ನಿಂದ ಪಿವಿಎಸ್ ರಸ್ತೆ ಪಾದಚಾರಿ ದಾಟಲು ಅಪಾಯವಾಗಿದ್ದು, ಡಿವೈಡರ್ ಆಳವಡಿಸಲು ಆಗ್ರಹ.
ಕಾವೂರು ಉಲ್ಲಾಸನಗರದಿಂದ ಹೆದ್ದಾರಿಗೆ ತೆರಳುವ ರಸ್ತೆಯಲ್ಲಿ ವೇಗನಿಯಂತ್ರಕಗಳನ್ನು ಅಳವಡಿಸಬೇಕಿದೆ.
ಪಾದಾಚಾರಿಗಳಿಗಾಗಿ ಫುಟ್‌ಪಾತ್ ಅಭಿಯಾನ
ನಗರದಲ್ಲಿ ಫುಟ್‌ಪಾತ್‌ಗಳು ಅತಿಕ್ರಮಣವಾಗುತ್ತಿರುವ ಹಿನ್ನೆಲೆಯಲ್ಲಿ ಪಾದಾಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ನಿಇದರಿಂದ ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ ಎದುರಾಗುತ್ತಿವೆ. ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿರುವುದರಿಂದ ಕ್ರಮ ಅನಿರ್ವಾಯವಾಗಿದೆ. ದೀಪಾವಳಿ ಬಳಿಕ ಪೊಲೀಸ್ ಇಲಾಖೆ ಮಂಗಳೂರು ಮಹಾನಗರ ಪಾಲಿಕೆ ಸಹಕಾರದಲ್ಲಿ ಫುಟ್‌ಪಾತ್ ಪಾದಾಚಾರಿಗಳಿಗಾಗಿ ಎಂಬ ಅಭಿಯಾನವನ್ನು ನಗರಾದ್ಯಂತ ಆರಂಭಿಸುವ ಮೂಲಕ ಫುಟ್‌ಪಾತ್‌ನಲ್ಲಿ ಅತಿಕ್ರಮಣವನ್ನು ತೆರವುಗೊಳಿಸಲಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದರು.
ಡಿಸಿಪಿಗಳಾದ ಸಿದ್ದಾರ್ಥ್ ಗೋಯಲ್, ದಿನೇಶ್ ಕುಮಾರ್, ಎಸಿಪಿಗಳಾದ ಪರಮೇಶ್ವರ್ ಹೆಗಡೆ, ಮಹೇಶ್ ಕುಮಾರ್, ಮನೋಜ್ ಕುಮಾರ್, ರವೀಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.