ಬಜಾಲ್ ವಾರ್ಡಿನ ಅಭಿವೃದ್ಧಿ ಕಡೆಗಣಿಸಿದರೆ ಹೋರಾಟ ತೀವೃಗೊಳ್ಳಲಿದೆ - ಸಂತೋಷ್ ಬಜಾಲ್

Update: 2023-07-19 14:47 GMT

ಮಂಗಳೂರು: ಜಲ್ಲಿಗುಡ್ಡೆ ಮುಖ್ಯರಸ್ತೆ ಹಾಗೂ ಜಯನಗರ ಸಹಿತ ಪ್ರಮುಖ ರಸ್ತೆಗಳ ಕಾಂಕ್ರೀಟಿಕರಣಗೊಳಿಸಲು ಒತ್ತಾಯಿಸಿ ಸಿಪಿಎಂ ಜಲ್ಲಿಗುಡ್ಡೆ ಘಟಕದ ಮಂಗಳವಾರ ಪ್ರತಿಭಟನೆ ನಡೆಸಿತು.

ಸಿಪಿಎಂ ನಗರ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಸ್ಮಾರ್ಟ್ ಸಿಟಿಯ ಹೆಸರಲ್ಲಿ ಕೋಟ್ಯಂತರ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿ ಅಭಿ ವೃದ್ಧಿ ಹೆಸರಲ್ಲಿ ಕಮಿಷನ್ ಪಡೆದು ಜನರ ತೆರಿಗೆ ಹಣವನ್ನು ಪೋಲು ಮಾಡುವ ಶಾಸಕರಿಗೆ ಬಜಾಲ್ ವಾರ್ಡಿನ ಮುಖ್ಯರಸ್ತೆಯನ್ನು ಅಗಲಿಸಿ ಕಾಂಕ್ರಿಟೀಕ ರಣಗೊಳಿಸಲು ಸಾಧ್ಯವಾಗದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್, ಸಿಪಿಎಂ ಜಲ್ಲಿಗುಡ್ಡೆ ಘಟಕದ ಕಾರ್ಯದರ್ಶಿ ದೀಪಕ್ ಬಜಾಲ್, ಮೋಹನ ಜಲ್ಲಿಗುಡ್ಡೆ, ನಗರ ಸಮಿತಿ ಸದಸ್ಯರಾದ ಲೋಕೇಶ್ ಎಂ, ಯೋಗೀಶ್ ಜಪ್ಪಿನಮೊಗರು, ಅಶೋಕ್ ಸಾಲ್ಯಾನ್, ಜಯಪ್ರಕಾಶ್ ಜಲ್ಲಿಗುಡ್ಡೆ, ಸಿಪಿಎಂ ಜಲ್ಲಿಗುಡ್ಡೆ ಮಹಿಳಾ ಘಟಕದ ಕಾರ್ಯದರ್ಶಿ ರೋಹಿಣಿ ಜಲ್ಲಿಗುಡ್ಡೆ, ಗೀತಾ ಪ್ರೇಮನಾಥ್, ಮಮತಾ ಜಯಪ್ರಕಾಶ್, ಡಿವೈಎಫ್‌ಐ ಮುಖಂಡರಾದ ಜಗದೀಶ್ ಬಜಾಲ್, ದೀಕ್ಷಿತ್ ಭಂಡಾರಿ, ಧೀರಜ್ ಬಜಾಲ್, ಆನಂದ ಬಜಾಲ್, ವರಪ್ರಸಾದ್, ದೀಕ್ಷಿತಾ ಜಲ್ಲಿಗುಡ್ಡೆ, ಮಮತಾ ಜಲ್ಲಿಗುಡ್ಡೆ, ಸ್ಥಳೀಯರಾದ ಅಯಾಝ್, ಸಂಕಪ್ಪ, ನಾರಾಯಣ, ಉಮ್ಮರಬ್ಬ ಹಿರಿಯರಾದ ಕೇಶವ ಭಂಡಾರಿ, ಲತೀಫ್ ಜಲ್ಲಿಗುಡ್ಡೆ, ಸದಾಶಿವ ನಾಯಕ್ ಮತ್ತಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News