ಬೆಂಗರೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ 112ನೆ ಶಾಖೆ ಉದ್ಘಾಟನೆ

Update: 2023-09-11 18:11 GMT

ಮಂಗಳೂರು,ಸೆ.11;ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಬೆಂಗ್ರೆ ಎಸ್ ಕೆ ಅಮೀನ್ ಸಭಾಂಗಣ ದಲ್ಲಿಂದು 112 ಶಾಖೆಯನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಬೆಂಗರೆಯಲ್ಲಿ ಹಿಂದೆ ಸಿಂಡಿಕೇಟ್ ಬ್ಯಾಂಕ್ ಶಾಖೆ ಇತ್ತು ಬಳಿಕ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಬೆಂಗರೆ ಪ್ರದೇಶದ ಜನರ ಬಹುದಿನಗಳ ಬೇಡಿಕೆ ಎಸ್ ಸಿ ಡಿಸಿಸಿ ಬ್ಯಾಂಕ್ ಶಾಖೆಯ ಮೂಲಕ ಈಡೇರಿದೆ. ಡಾ.ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ 100 ಕೋಟಿ ಇದ್ದ ಬ್ಯಾಂಕ್ ಸುಮಾರು 14 ಸಾವಿರ ಕೋಟಿ ಆರ್ಥಿಕ ವ್ಯವಹಾರ ನಡೆಸುವ ಸಾಮರ್ಥ್ಯ ಹೊಂದಿದೆ. ರಾಷ್ಟ್ರೀಯ ಬ್ಯಾಂಕ್ ಗಳಿಗೆ ಸರಿಸಮಾ ನವಾದ ಬ್ಯಾಂಕ್ ಆಗಿ ಎಸ್ ಸಿಡಿಸಿಸಿ ಕಾರ್ಯ ನಿರ್ವಹಿಸುತ್ತಿದೆ. ಕೊರೋನಾ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಪೂರ್ಣ ರೀತಿಯಲ್ಲಿ ಸಹಕಾರ ನೀಡಿರುವ ಬ್ಯಾಂಕ್ ಮೂಲಕ ಆಶಾ ಕಾರ್ಯಕರ್ತರಿಗೆ ಆರ್ಥಿಕ ನೆರವು, ಫುಡ್ ಕಿಟ್, ಆಂಬುಲೆನ್ಸ್ ಸೇವೆ, ಕ್ವಾರಂಟೈನ್ ಸಂದರ್ಭ ದಲ್ಲಿ ಸಮಾಜಕ್ಕೆ ಸಾಕಷ್ಟು ನೆರವು ನೀಡುತ್ತಾ ಬಂದಿದೆ. ರಾಜೇಂದ್ರ ಕುಮಾರ್ ತಮ್ಮ ಸಮರ್ಥ ನಾಯಕತ್ವ ದಿಂದ ಸಹಕಾರ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,ಬ್ಯಾಂಕ್ ಬೆಂಗರೆಯ ಜನರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಲಿ ಎನ್ನುವುದು ನಮ್ಮ ಆಶಯ .ಗ್ರಾಹಕರನ್ನು ಆರ್ಥಿಕ ವಾಗಿ ಬಲಿಷ್ಠ ರನ್ನಾಗಿ ಮಾಡುವುದು ಬ್ಯಾಂಕ್ ನ ಪ್ರಮುಖ ಗುರಿ ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಬೆಂಗರೆಯಲ್ಲಿ45 ಸ್ವ ಸಹಾಯ ಗುಂಪು ರಚನೆಯಾಗಿದೆ.ಸುಮಾರು 12.50 ಕೋಟಿ ರೂಪಾಯಿ ಠೇವಣಿ ಸಂಗ್ರಹವಾಗಿದೆ. ಮೀನುಗಾರರು ಶ್ರಮ ಜೀವಿಗಳು. ಕಡಲಿಗೆ ಹೋಗಿ ಮೀನು ಹಿಡಿದು ತಮ್ಮ ಕುಟುಂಬದ ರಕ್ಷಣೆಯ ಜೊತೆಗೆ ಸಮಾಜದ ಪರ ಕಾಳಜಿ ಉಳ್ಳವರು. ಮಹಿಳೆಯರ ಅಭಿವೃದ್ಧಿಗಾಗಿ ಬ್ಯಾಂಕ್ ಹತ್ತಾರು ಯೋಜನೆಗಳನ್ನು ರೂಪಿಸಿದೆ. ಮುಂದಿನ ಮೂರು ತಿಂಗಳು ಬ್ಯಾಂಕ್ ನಲ್ಲಿ ಠೇವಣಿ ಇಡುವ ಗ್ರಾಹಕರಿಗೆ 0.5 ಹೆಚ್ಚು ವರಿ ಬಡ್ಡಿ ನೀಡಲಾಗುವುದು. ಬೆಂಗರೆ ಶಾಖೆಯ ಮುಂದಿನ ವ್ಯವಹಾರ ಗಮನಿಸಿ ಎಟಿಎಂ ಆರಂಭಿಸಲು ಚಿಂತಿಸಲಾಗುವುದು.ಬ್ಯಾಂಕ್ ನ ಸೇವಾ ಸಮಯವನ್ನು ಸ್ಥಳೀಯ ಜನರಿಗೆ ಅನುಕೂಲವಾಗುವಂತೆ ಮಾರ್ಪಾಡು ಮಾಡಬಹುದು.ಪಡೆದುಕೊಂಡ ಸಾಲ ದುರುಪಯೋಗ ಮಾಡದೇ 100 ಶೇ. ವಾಪಾಸ್ ಪಾವತಿ ಮಾಡುವುದರಲ್ಲಿ ಮಹಿಳೆಯರು ಮುಂದೆ.ಬೆಂಗ್ರೆಯಲ್ಲಿ ಮಹಿಳಾ ಸದಸ್ಯರು ಸಕ್ರಿಯ ವಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದರು.

ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಮುನೀಬ್ ಮಾತನಾಡುತ್ತಾ, ಬೆಂಗರೆ ಪ್ರದೇಶದ ಜನರ ಬೇಡಿಕೆಗೆ ಸ್ಪಂದಿಸಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಮುಂದೆ ಈ ಪ್ರದೇಶದ ಅಭಿವೃದ್ಧಿಗೆ ಬ್ಯಾಂಕ್ ನ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.

ಸಮಾರಂಭದ ವೇದಿಕೆಯಲ್ಲಿ ಅತಿಥಿ ಗಳಾಗಿ ನವಮಂಗಳೂರು ಬಂದರು ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಭರತ್ ಕುಮಾರ್, ಮಹಾಜನ ಸಭಾ ಬೆಂಗ್ರೆ ಇದರ ಅಧ್ಯಕ್ಷ ಕೇಶವ ಕರ್ಕೇರ, ಮತ್ಯೋದ್ಯಮಿ ಶಶಿಕುಮಾರ್ ಬೆಂಗ್ರೆ, ಮೋಹನ್ ಬೆಂಗ್ರೆ,ಚೇತನ್ ಬೆಂಗ್ರೆ ಅಲ್ ಮದ್ರಸತುಲ್ ದೀನಿಯ್ಯ ಅಸೋಸಿಯೇಷನ್ ಮೊಹಿಯುದ್ಧೀನ್ ಜುಮಾ ಮಸೀದಿ ಕಸಬ ಬೆಂಗರೆ ಅಧ್ಯಕ್ಷ ಬಿಲಾಲ್ ಮೊಯ್ದಿನ್, ಮೊಗವೀರ ಮುಖಂಡ ರಾದ ಸುರೇಶ್ ಸುವರ್ಣ, ಸಂಜಯ ಸುವರ್ಣ, ಎಸ್ ಸಿಡಿಸಿಸಿ ಬ್ಯಾಂಕಿನ ಉಪಾ ಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ ,ಬ್ಯಾಂಕ್ ನಿರ್ದೇ ಶಕರುಗಳಾದ ಎಂ.ವಾದಿರಾಜ ಶೆಟ್ಟಿ , ಮೋನಪ್ಪ ಶೆಟ್ಟಿ , ಕೆ.ಜೈರಾಜ್ ಬಿ ರೈ , ರಾಜೇಶ್ ರಾವ್ , ಸದಾಶಿವ ಉಳ್ಳಾಲ್, ಭಾಸ್ಕರ್ ಕೋಟ್ಯಾನ್, ಹರಿಶ್ಚಂದ್ರ, ಉಳ್ಳಾಲ್,ರಮೇಶ್‌ ಹೆಚ್.ಎನ್.ಶಾಖಾ ವ್ಯವಸ್ಥಾಪಕ ಸುದರ್ಶನ ಕುಮಾರ್ ಯು.ಕೆ. ಮತ್ತಿತರರು ಉಪಸ್ಥಿತರಿದ್ದರು.

ಆರ್.ಜೆ.ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಗೋಪಾಲಕೃಷ್ಣ ಭಟ್ ವಂದಿಸಿದರು.


 






 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News