ಬೀಟಿಗೆ: ಹಯಾತುಲ್ ಇಸ್ಲಾಂ ಮದರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2023-08-15 07:13 GMT

ಬೀಟಿಗೆ: ಇಲ್ಲಿನ ಹಯಾತುಲ್ ಇಸ್ಲಾಂ ಮದರಸ ದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು.

ಮದರಸ ಆಡಳಿತ ಸಮಿತಿ ಅಧ್ಯಕ್ಷರಾದ ಶಂಸುದ್ದೀನ್ ಡಿ.ಕೆ ಇವರು ಧ್ವಜಾರೋಹಣ ಗೈದರು, ಅಹಮ್ಮದ್ ಕುಂಞಿ ಮುಸ್ಲಿಯಾರ್ ದುವಾ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಅಬ್ದುಲ್ ಹಮೀದ್ (ಅದ್ದು) ಮದರಸ ಉಪಾಧ್ಯಕ್ಷ ಖಾದರ್ (ಪುತ್ತು) ಕಾರ್ಯದರ್ಶಿ ನಝೀರ್ ಫಾಲ್ಕಾನ್ ಕೋಶಾಧಿಕಾರಿ ಝುಭೈರ್ ಎ.ಕೆ ಉಪಸ್ಥಿತರಿದ್ದರು ಅಶ್ರಫ್ ಚಾರ್ಮಾಡಿ ವಂದಿಸಿ,ಧನ್ಯವಾದಗೈದರು. ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News