ಯೆನೆಪೊಯ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2024-10-01 11:09 GMT

ಮಂಗಳೂರು, ಅ.1: ಯೆನೆಪೊಯ ಮೊಯ್ದಿನ್ ಕುಂಞಿ ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್, ಜೆಪ್ಪಿನಮೊಗರು ಇದರ ವತಿಯಿಂದ ಶಿಕ್ಷಕರಿಗೆ ಶಿಕ್ಷಣ ಕ್ಷೇತ್ರದಲ್ಲಿ ಶ್ರೇಷ್ಠತೆ ಹಾಗೂ ನಾವೀನ್ಯತೆಗಳನ್ನು ಪ್ರೋತ್ಸಾಹಿಸಲು ನೀಡಲಾಗುವ 2024ನೇ ಸಾಲಿನ ‘ಯೆನೆಪೊಯ ಶಿಕ್ಷಕ ಪ್ರಶಸ್ತಿ’ಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢಶಾಲಾ ಶಿಕ್ಷಕರು, ಕಲೆ ಮತ್ತು ಕರಕುಶಲ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಪದವಿ ಪೂರ್ವ ವಿಶ್ವವಿದ್ಯಾಲಯದ ಶಿಕ್ಷಕರು, ಮುಖ್ಯೋಪಾಧ್ಯಾಯರು, ರಾಜ್ಯ, ಕೇಂದ್ರ ಅಥವಾ ಖಾಸಗಿ ಶಾಲಾ ಯೋಜನೆಯಡಿಯಲ್ಲಿ ಯಾವುದೇ ಸರಕಾರಿ, ಅನುದಾನಿತ, ಅನುದಾನರಹಿತ, ಸಂಸ್ಥೆಯ ಪ್ರಾಂಶುಪಾಲರು ಈ ಪ್ರಶಸ್ತಿಗೆ ಅರ್ಹರು.

ಈ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರನ್ನು ನವೆಂಬರ್ 14ರಂದು ಸ್ಥಾಪಕರ ದಿನದಂದು ರೂ. 15,000 ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಅನುಸರಿಸಬೇಕಾದ ಮಾನದಂಡ ಇಂತಿವೆ. ಅರ್ಜಿದಾರರು 10 ವರ್ಷಗಳ ಬೋಧನಾ ಸೇವೆಯನ್ನು ಪೂರ್ಣಗೊಳಿಸಿರಬೇಕು, ಅವರು ಶಿಕ್ಷಣ ಕ್ಷೇತ್ರದಲ್ಲಿ ಅರ್ಹತೆ ಮತ್ತು ಶ್ರೇಷ್ಠತೆಯ ದಾಖಲೆಯನ್ನು ಸಾಬೀತುಪಡಿಸಿರಬೇಕು.

ಶಿಕ್ಷಕರು ಅರ್ಜಿ ನಮೂನೆಯನ್ನು ಸಂಸ್ಥೆಯ ಮುಖ್ಯಸ್ಥರು ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದ ದೃಢೀಕರಿಸಿದ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅಕ್ಟೋಬರ್ 31ರಂದು ಸಲ್ಲಿಸಬೇಕು. ಅರ್ಜಿದಾರರು ದಾಖಲೆಯ ಮುದ್ರಿತ ಪ್ರತಿಯನ್ನು ಶಾಲಾ ಕಚೇರಿಗೆ ಬಂದು ಸಲ್ಲಿಸಬಹುದು ಅಥವಾ tys@yenepoya.edu.in / programmecommittee.tys@yenepoya.edu.inಗೆ ಇ-ಮೇಲ್ ಕೂಡಾ ಮಾಡಬಹುದು.

ಅರ್ಜಿ ನಮೂನೆ ಯೆನೆಪೊಯ ಶಾಲಾ ಕಚೇರಿಯಲ್ಲಿ ಲಭ್ಯವಿದೆ. ಮುದ್ರಿತ ಪ್ರತಿಯನ್ನು ಸಂಗ್ರಹಿಸಲು ಬರಲು ಸಾಧ್ಯವಾಗದ ಆಸಕ್ತ ಅರ್ಜಿದಾರರಿಗೆ ಫಾರ್ಮ್ ಅನ್ನು ಇ-ಮೇಲ್ ಮೂಲಕ ಕಳುಹಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಯೆನೆಪೊಯ ಶಾಲೆ ಜೆಪ್ಪಿನಮೊಗರು ಮಂಗಳೂರು ಸಂಪರ್ಕ ಸಂಖ್ಯೆ (0824-2241846 / 9945922705 / 82173 92045) ಅನ್ನು ಸಂಪರ್ಕಿಸುವಂತೆ ಯೆನೆಪೊಯ ಶಾಲೆಯ ಸಹಾಯಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News