ಕಾರ್ಕಳ: ಪ್ರಚೋದನಕಾರಿ ಭಾಷಣ; ಬಜರಂಗದಳ ಮುಖಂಡರ ವಿರುದ್ಧ ಪ್ರಕರಣ ದಾಖಲು
Update: 2023-08-15 15:47 GMT
ಕಾರ್ಕಳ : ಪ್ರಚೋದನಕಾರಿ ಭಾಷಣದ ಹಿನ್ನೆಲೆಯಲ್ಲಿ ಬಜರಂಗದಳ ಮುಖಂಡರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಬಜರಂಗದಳ ಮಂಗಳೂರು ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ ಹಾಗೂ ಕಾರ್ಕಳ ನಗರ ಬಜರಂಗದಳ ಸಂಚಾಲಕ ಸಂಪತ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ. 13ರಂದು ಕಾರ್ಕಳ ನಗರ ಬಜರಂಗದಳ ವತಿಯಿಂದ ಕಾರ್ಕಳದಲ್ಲಿ ನಡೆದ ಪಂಜಿನ ಮೆರವಣಿಗೆ ಸಭಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಪುನೀತ್ ಅತ್ತಾವರ ಬ್ಯಾರಿ ಯಾವ ಕೈಯಿಂದ ಗೋಮಾತೆಯನ್ನು ಕಡಿಯುತ್ತಾನೋ, ಅವನ ದೇಹದಿಂದ ಅದೇ ಕೈಯನ್ನು ಬೇರ್ಪಡಿಸುವ ಸಂಕಲ್ಪ ತೊಡಬೇಕೆಂದು ಹೇಳಿದ ಹಿನ್ನೆಲೆಯಲ್ಲಿ ಕಾರ್ಕಳ ನಗರ ಠಾಣೆ ಪೊಲೀಸರು ಭಾನುವಾರವೇ ಪ್ರಕರಣ ದಾಖಲಿಸಿಕೊಂಡಿದ್ದರು.