ಕೊಣಾಜೆ: ಪ್ಲಾಸ್ಟಿಕ್ ಬಳಕೆಗೆ ಕಟ್ಟುನಿಟ್ಟಿನ ಕ್ರಮ; ಮಾಜಿ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಆಗ್ರಹ
ಕೊಣಾಜೆ: ಬಯಲು ಕಸಾಲಯಗಳನ್ನು ಅಳಿಸಿ ಸ್ವಚ್ಛತೆ ಸಾಧಿಸಲು ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದು, ಸುಡುವುದನ್ನು ತಡೆಯಲು ಸ್ವಚ್ಛತಾ ನೀತಿ, ಪ್ಲಾಸ್ಟಿಕ್ ನಿಷೇಧ ಅಧಿನಿಯಮದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಮಾಜಿ ಒಂಬುಡ್ಸ್‍ಮೆನ್ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಬಾಳೆಪುಣಿ ಪಂಚಾಯಿತಿ ಅಧಿಕಾರಿ ಸ್ವಚ್ಛತೆ ಕಾರ್ಯಪಡೆ ಮುಖ್ಯಸ್ಥರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಬಾಳೆಪುಣಿ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಬದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಬಿಸಾಡುವುದು ಸುಡುವುದನ್ನು ತಡೆಯುವ ಉದ್ದೇಶದಿಂದ ಶ ನಿರಂತರ ಶ್ರಮಾದಾನ ಮತ್ತು ಅರಿವಿನ ಅಭಿಯಾನವನ್ನೇ ಆರಂಭಿಸಿ ಕಳೆದ 16 ವಾರಗಳಿಂದ ಸ್ಮೈಲ್ ಸ್ಕಿಲ್ ಸ್ಕೂಲಿನ ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಕರು ಶ್ರಮಾದಾನ ಮೂಲಕ ರಸ್ತೆ ಬದಿ ತ್ಯಾಜ್ಯಗಳನ್ನು ಸಂಗ್ರಹಿಸಿ, ವಿಂಗಡಿಸಿ ಪಂಚಾಯತ್‍ನ ಸ್ವಚ್ಛ ಸಂಕೀರ್ಣದ ಮೂಲಕ ನಿರ್ವಹಿಸುತ್ತಿದೆ.
ಆದರೆ ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ನಿರಂತರವಾಗಿ ಕಸ ಬಿಸಾಡುವುದನ್ನು ತಡೆಯಲು ಸಾಧ್ಯವಾಗದೆ ಇರುವುದರಿಂದ ಶ್ರಮಾದಾನ ಮಾಡಿದ ಜನ ಶಿಕ್ಷಣ ಟ್ರಸ್ಟ್ ವಠಾರದಲ್ಲೇ ಬಿಸಾಡಿರುವ ಪ್ಯಾಡ್, ಪ್ಯಾಂಪರ್ಸ್‍ಗಳನ್ನು ಸಂಗ್ರಹಿಸಿದ ಚೀಲದೊಂದಿಗೆ ಕಸ ಬಿಸಾಡುವುದನ್ನು ತಡೆಯಲು ಪ್ಲಾಸ್ಟಿಕ್ ನಿಷೇಧ ಅಧಿನಿಯಮದಂತೆ ಕಟ್ಟುನಿಟ್ಟಿನ ಅಗತ್ಯ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.