ಕೊಣಾಜೆ: ಮಹಿಳಾ ಸ್ವಾವಲಂಬನೆ ಹಾಗೂ ಸ್ವ ಉದ್ಯೋಗ ತರಬೇತಿ ಶಿಬಿರ ಉದ್ಘಾಟನೆ

Update: 2023-07-28 17:23 GMT

ಕೊಣಾಜೆ: ಜೆಸಿಐ ಮಂಗಳಗಂಗೋತ್ರಿ ಕೊಣಾಜೆ, ವಿಜಯ ಗ್ರಾಮೀಣ ಅಭಿವೃದ್ಧಿ ಫೌಂಡೇಶನ್ (ರಿ ),ಬ್ಯಾಂಕ್ ಆಫ್ ಬರೋಡ, ಕೊಣಾಜೆ ಬ್ರಾಂಚ್ ಹಾಗೂ ಗಂಗೋತ್ರಿ ಸಂಜೀವಿನಿ ಮಹಿಳಾ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಸ್ವಪ್ತ ಸ್ವರ ಕಲಾ ಕೇಂದ್ರ ಕೊಣಾಜೆ ಇಲ್ಲಿ ಮಹಿಳೆಯರಿಗೆ ಮಹಿಳಾ ಸ್ವಾವಲಂಬನೆ, ಸ್ವಉದ್ಯೋಗ ತರಬೇತಿ ಶಿಬಿರ ಹಾಗೂ ಸರ್ಕಾರಿ ಮತ್ತು ಬ್ಯಾಂಕ್ ಗಳ ಸಾಲ ಸೌಲಭ್ಯ ಪಡೆಯುವ ಬಗ್ಗೆ ಮಾಹಿತಿ ಶಿಬಿರ ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಜೆಸಿಐ ಮಂಗಳಗಂಗೋತ್ರಿಯ ಕೊಣಾಜೆ ಘಟಕದ ಅಧ್ಯಕ್ಷರಾದ ಡಾ. ನರಸಿಂಹಯ್ಯ ಅವರು ಮಹಿಳಾ ಸ್ವಾವಲಂಬನೆಯೇ -ದೇಶದ ಸ್ವಾವಲಂಬನೆ . ಜೆಸಿಐ ಮೂಲ ಉದ್ದೇಶವೇ ಜನರಲ್ಲಿ ಸ್ವಾವಲಂಬಿ ಬದುಕು ಕಟ್ಟುವುದು ಮತ್ತು ಸಮೃದ್ಧಿ ದೇಶ ನಿರ್ಮಿಸಲು ಶ್ರಮಿಸಿಸುದಾಗಿದೆ. ಜನರಲ್ಲಿ ಉತ್ತಮ ವ್ಯಕ್ತಿತ್ವ ಮೂಡಿಸುವ ಕಾರ್ಯದಲ್ಲಿ ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹಣಕಾಸು ಸಾಕ್ಷರತ ಕೇಂದ್ರ, ಅಮೂಲ್ಯ,ಮಂಗಳೂರಿನ ಹಣಕಾಸು ಸಾಕ್ಷರತಾ ಅಧಿಕಾರಿಗಳು ಮುಖ್ಯ ಅತಿಗಳಾಗಿ ಭಾಗವಹಿಸಿ, ಹಣಕಾಸಿನ ಉಳಿತಾಯ, ವಿವಿಧ ಸಾಲ ಯೋಜನೆಗಳ ಬಗ್ಗೆ, ಸ್ವಉದ್ಯೋಗದಲ್ಲಿ ಯಶಸ್ವಿ ಉದ್ಯಮಿ ಆಗುವುದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅನಿತಾ ಪಿಂಟೋ ಅವರು ಕಾರ್ಯಕ್ರಮದಲ್ಲಿ ಸ್ವ ಉದ್ಯೋಗ ಕ್ಕೆ ಸಂಬಂದಿಸಿದ ಸಾಲ ಸೌಲಭ್ಯಗಳಿಗೆ ಸಂಪೂರ್ಣ ಮಾಹಿತಿ ನೀಡಿದರು.

ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಸುಬ್ರಮಣ್ಯ ನಾಯ್ಕ್, ಅವರು ಸರ್ಕಾರದ ವತಿಯಿಂದ ದೊರೆಯುವ ರೈತ ತರಬೇತಿ, ಮಹಿಳೆಯರಿಗೆ ದೊರೆಯುವ ತರಬೇತಿ ಮತ್ತು ಸಾಲ ಸೌಲಭ್ಯಗಳನ್ನು ಮಹಿಳೆಯರಿಗೆ ತಿಳಿಸಿದರು.

ಬ್ಯಾಂಕ್ ಆಫ್ ಬರೋಡ ಕೊಣಾಜೆ ಶಾಖೆ ಪ್ರಬಂಧಕರಾದ ಡೇರಿಕ್ ಡಿಸೋಜಾ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಂಗಳಗಂಗೋತ್ರಿ ಸಂಜೀವಿನಿ ಮಹಿಳಾ ಒಕ್ಕೂಟದ ಪ್ರತಿನಿಧಿಯಾದ ಪೂರ್ಣಿಮಾ ಶೆಟ್ಟಿ ಕಾರ್ಯಕ್ರಮದಲ್ಲಿ ಗಣ್ಯರನ್ನು ಸ್ವಾಗತಿಸಿ, ನಿರೂಪಿಸಿದರು, ಆರಿಫ್ ಕಲ್ಕಟ್ಟ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News