ಮಂಗಳೂರು: ಕೊಂಕಣಿ ಭಾಷಾ ಮಾನ್ಯತೆ ದಿನಾಚರಣೆ
ಮಂಗಳೂರು : ಕೊಂಕಣಿ ಮಾತೃಭಾಷೆಗೆ 1992ರ ಆಗಸ್ಟ್ 20ರಂದು ಹಬ್ಬದ ದಿನವಾಗಿದೆ. ರಾಷ್ಟ್ರೀಯ ಮಾನ್ಯತೆ ಪಡೆದು ನಮಗೆ ಕೊಂಕಣಿಗರಿಗೆ ಗೌರವ ಬಂದ ದಿನವೂ ಆಗಿದೆ ಎಂದು ಮಂಗಳೂ ಕ್ರೈಸ್ತ ಧರ್ಮಪ್ರಾಂತದ ಪಿಆರ್‌ಒ ರೋಯ್ ಕಾಸ್ತೆಲಿನೊ ಹೇಳಿದರು.
ಕೊಂಕಣಿ ಭಾಷೆಗೆ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಮಾನ್ಯತೆ ಸಿಕ್ಕಿದ ದಿನದ ಹಿನ್ನೆಲೆಯಲ್ಲಿ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಜಂಟಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಮಂಗಳವಾರ ನಡೆದ ಮಾನ್ಯತಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೊಂಕಣಿ ಬಾವುಟ ಆರೋಹಣ ಮಾಡಿ ಅವರು ಮಾತನಾಡಿದರು.
ಕೊಂಕಣಿ ಭಾಷೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕ ಎಂಎ ಉತ್ತೀರ್ಣ ಮಾಡಿದ ಏಳು ಮಂದಿಗೆ ಗೌರವ ಪತ್ರ ಮತ್ತು ಗೌರವ ಧನ ನೀಡುವ ಮೂಲಕ ಅಭಿನಂದಿಸಲಾಯಿತು.
ಪ್ರಶಾಂತ್ ಶೇಟ್, ಸಿಯೆಎಸ್‌ಎಸ್ ನಾಯಕ ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕ ಕೊಂಕಣಿ ಅಕಾಡಮಿ ಅಧ್ಯಕ್ಷ ಸ್ಟೇನಿ ಆಲ್ವಾರಿಸ್ ಸ್ವಾಗತಿಸಿದರು. ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಕಾರ್ಯದರ್ಶಿ ರೇಮಂಡ್ ಡಿಕುನ್ಹಾ ತಾಕೊಡೆ ವಂದಿಸಿದರು. ಅಕಾಡಮಿಯ ಸದಸ್ಯರಾದ ಸಪ್ನಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.