ಮಂಗಳೂರು: ಲಲಿತಾ ಜ್ಯುವೆಲ್ಲರಿಯಲ್ಲಿ ʼಅರೇಬಿಯನ್ ಜ್ಯುವೆಲ್ಲರಿʼ ಕಲೆಕ್ಷನ್ ಆರಂಭ
ಮಂಗಳೂರು: ನಗರದ ಪಿವಿಎಸ್ ಸರ್ಕಲ್ ಬಳಿಯ ಕುಶೆ ಸದನದಲ್ಲಿರುವ ಲಲಿತಾ ಜ್ಯುವೆಲ್ಲರಿ ಮಾರ್ಟ್ ಲಿಮಿಟೆಡ್ ವತಿಯಿಂದ ʼಅರೇಬಿಯನ್ ಜ್ಯುವೆಲ್ಲರಿʼ ಕಲೆಕ್ಷನ್ ಆರಂಭಗೊಂಡಿದೆ.
ಮಂಗಳೂರಿನ ಎಮ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ ʼಅರೇಬಿಯನ್ ಜ್ಯುವೆಲ್ಲರಿʼ ಕಲೆಕ್ಷನನ್ನು ಶುಕ್ರವಾರ ಉದ್ಘಾಟಸಿದರು.
ಬಳಿಕ ಮಾತನಾಡಿದ ಅವರು ಆಂಧ್ರಪ್ರದೇಶದ ನೆಲ್ಲೂರಿನ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಕಿರಣ್ ಕುಮಾರ್ ಎಂಬ 12 ವರ್ಷದ ಅರ್ಧದಲ್ಲೇ ಶಾಲೆ ಬಿಟ್ಟ ಹುಡುಗ 1988ರಲ್ಲಿ ಲಲಿತಾ ಜ್ಯುವೆಲ್ಲರಿ ಮಾರ್ಟ್‌ನ್ನು ಸ್ಥಾಪಿಸಿದರು. ಇಂದು ದಕ್ಷಿಣ ಭಾರತದಲ್ಲೇ 55 ಶಾಖೆಗಳನ್ನು ಆರಂಭಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ದ.ಕ.ಜಿಲ್ಲಾ ಕೇಂದ್ರದಲ್ಲೇ ಇದು ಸ್ಥಾಪನೆ ಗೊಂಡಿದ್ದರೂ ಅರಬಿಕ್ ಶೈಲಿಯ ಚಿನ್ನಾಭರಣ ಇಲ್ಲಿ ಲಭ್ಯವಾಗುತ್ತಿಲ್ಲ ಎಂಬ ಕೊರಗು ಇತ್ತು. ಅದನ್ನು ಇದೀಗ ನಿವಾರಿಸಲಾಗಿದೆ. ಇಂದಿನಿಂದ ಇಲ್ಲಿ ಎಲ್ಲಾ ವಿನ್ಯಾಸದ ಅರಬಿಕ್ ಶೈಲಿಯ ಚಿನ್ನಾಭರಣ ಸಿಗಲಿದೆ. ಉತ್ತಮ ಸೇವೆ ನೀಡಿದ್ದಲ್ಲಿ ಗ್ರಾಹಕರು ಬೆಂಬಲಿಸುವ ವಿಶ್ವಾಸವಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮತ್ತು ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಎಸ್.ಕೆ. ಸುಮಯ್ಯ ಶುಭ ಹಾರೈಸಿದರು.
ಲಲಿತಾ ಜ್ಯುವೆಲ್ಲರಿಯ ಎಜಿಎಂ ಅನಿಲ್ ಕುಮಾರ್ ಜಿ.ಎಚ್., ಮ್ಯಾನೇಜರ್‌ಗಳಾದ ಪ್ರಶಾಂತ್ ಕುಮಾರ್, ಶಶಿಧರರ್ ಎಂ. ಉಪಸ್ಥಿತರಿದ್ದರು.
ಲಲಿತಾ ಜ್ಯುವೆಲ್ಲರಿಯಲ್ಲಿ ಅರೇಬಿಯಾದ ಐಶ್ವರ್ಯವನ್ನು ಪರಿಚಯಿಸಲಾಗುತ್ತಿದೆ. ಅರೇಬಿಯನ್ ಜೊತೆ ಐಷಾರಾಮಿ ಸೆಟ್ಟಿಂಗ್ ಮಾಡಲಾಗಿದೆ. ಪ್ರಾಚೀನ ಸಂಪ್ರದಾಯಗಳ ಜೊತೆಗೆ ಆಧುನಿಕ ಸೊಬಗುಗಳಿಗೂ ಒತ್ತು ನೀಡಲಾಗಿದೆ. ಇಲ್ಲಿ ವಿವಿಧ ವಿನ್ಯಾಸಗಳ, ಸೂಕ್ಷ್ಮವಾದ ಮತ್ತು ಕರಕುಶಲತೆಯ ಚಿನ್ನಾಭರಣ ಲಭ್ಯವಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣವನ್ನು ಕೈಗೆಟಕುವ ದರದಲ್ಲಿ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.