ಮಂಗಳೂರು ವಿವಿ ಪದವಿ ಫಲಿತಾಂಶ ಪ್ರಕಟ

Update: 2024-08-17 15:30 GMT

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಜೂನ್ ಮತ್ತು ಜುಲೈ 2024ರಲ್ಲಿ ನಡೆಸಿದ ಎಲ್ಲಾ ಪದವಿ ಕೋರ್ಸ್‌ಗಳ ದ್ವಿತೀಯ, ಚತುರ್ಥ ಮತ್ತು ಆರನೇ ಸೆಮಿಸ್ಟರ್‌ನ ಪರೀಕ್ಷೆಗಳ ಫಲಿತಾಂಶ ಆ.17ರಂದು ಪ್ರಕಟಗೊಂಡಿದೆ.

ವಿದ್ಯಾರ್ಥಿಗಳು ಯುಯುಸಿಎಂಎಸ್‌ನ ವೆಬ್‌ಸೈಟ್ www.uucms.karnataka.gov.in ಮೂಲಕ ಫಲಿತಾಂಶವನ್ನು ಪಡೆಯಬಹುದು.

ಪರೀಕ್ಷೆ ಜೂ.24ರಿಂದ ಜು.31ರ ತನಕ ನಡೆದಿತ್ತು. ಈ ಪರೀಕ್ಷೆಗಳ ವಿವಿಧ ವಿಷಯಗಳ ಮೌಲ್ಯಮಾಪನವು ನಾಲ್ಕು ಮೌಲ್ಯಮಾಪನ ಕೇಂದ್ರಗಳಲ್ಲಿ ಜು.22ರಿಂದ ಆರಂಭಗೊಂಡು ಆ.14ರಂದು ಮುಕ್ತಾಯಗೊಂಡಿತ್ತು. ಮೌಲ್ಯಮಾಪನ ಪೂರ್ಣಗೊಳಿಸಿದ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಎಸ್‌ಡಬ್ಲ್ಯು ಬಿ.ಸಿ.ಎ, ಬಿ.ಬಿ.ಎ, .ಎಸ್ಸಿ(ಎಫ್‌ಎನ್‌ಡಿ)/ಬಿ.ಎಸ್ಸಿ (ಎನ್ಯಿಮೇಶನ್ ಮತ್ತು ವಿಜುವಲ್ ಇಫೆಕ್ಟ್ಸ್/ಬಿ.ಎಸ್ಸಿ (ಫುಡ್ ಟೆಕ್ನಾಲಾಜಿ), ಬಿ.ಎಸ್ಸಿ(ಹೊಂಸೈನ್ಸ್), ಬಿ.ಎ(ಎಚ್‌ಆರ್‌ಡಿ)/ಬಿ.ಎಸ್ಸಿ(ಫ್ಯಾಶನ್ ಡಿಸೈನ್)/ಬಿ.ಎಸ್ಸಿ(ಐ ಡಿ ಆ್ಯಂಡ್ ಡಿ)/ಬಿ.ವಿ.ಎ ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದೆ. ಉಳಿದಂತೆ ಎಲ್ಲಾ ಪದವಿಗಳ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್‌ಗಳ ಹಾಗೂ ಬಿ.ಹೆಚ್.ಎಂ, ಬಿ.ಎಸ್ಸಿ(ಎಚ್‌ಎಸ್) ಮತ್ತು ಬಿ.ಎ(ಎಸ್‌ಎಲ್ಪಿ) ಹಾಗೂ ನಾನ್ ಎನ್‌ಇಪಿ ಕಾರ್ಯಕ್ರಮಗಳ ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು.

ಮಂಗಳೂರು ವಿಶ್ವವಿದ್ಯಾನಿಲಯವು ಈ ಬಾರಿ ಮೌಲ್ಯಮಾಪನ ಕೇಂದ್ರದಲ್ಲಿಯೇ ಅಂಕತಃಖ್ತೀಕರಣ ದಾಖಲಿಸುವ ಪ್ರಕ್ರಿಯೆಯನ್ನು ಆನ್ ಲೈನ್ ವ್ಯವಸ್ಥೆ ಮೂಲಕ ಸಂಪೂರ್ಣವಾಗಿ ಗಣಕೀಕರಣಗೊಳಿಸಿದ್ದರಿಂದ ಮೌಲ್ಯಮಾಪನ ಮುಗಿದ ಮೂರು ದಿನಗಳಲ್ಲಿಯೇ ಮತ್ತು ಪರೀಕ್ಷೆಗಳು ಪೂರ್ಣಗೊಂಡ 17 ದಿನಗಳಲ್ಲಿ ಫಲಿತಾಂಶಗಳನ್ನು ಪ್ರಕಟಿಸಲು ಸಾಧ್ಯವಾ ಗಿದೆ ಪರೀಕ್ಷಾಂಗ ಕುಲಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News