ಮಂಗಳೂರು: ರಾಜ್ಯಪಾಲರ ಹುದ್ದೆ ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ

Update: 2024-08-29 17:19 GMT

ಮಂಗಳೂರು: ಯಾವುದೇ ಹಗರಣ ಅಥವಾ ಪ್ರಕರಣ ನಡೆದಾಗ ತನಿಖೆ ನಡೆಸಿ ನ್ಯಾಯಾಂಗದ ಚೌಕಟ್ಟಿನಲ್ಲಿ ತಪ್ಪಿತಸ್ಥ ರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಸರಕಾರಗಳ ಕರ್ತವ್ಯವಾಗಿದೆ. ಆದರೆ ಕೇಂದ್ರ ಸರಕಾರವು ರಾಜ್ಯ ಸರಕಾರವನ್ನು ರಾಜ್ಯಪಾಲರ ಹುದ್ದೆಯನ್ನು ದುರ್ಬಳಕೆ ಮಾಡುತ್ತಿದೆ. ಹಾಗಾಗಿ ಈ ಹುದ್ದೆಯನ್ನು ರದ್ದುಗೊಳಿಸಬೇಕು ಎಂದು ಸಿಪಿಐ ಮಂಗಳೂರು ತಾಲೂಕು ಸಮಿತಿಯ ಕಾರ್ಯದರ್ಶಿ ಕರುಣಾಕರ ಮಾರಿಪಳ್ಳ ಆಗ್ರಹಿಸಿದರು.

ಸಿಪಿಐ ಮಂಗಳೂರು ತಾಲೂಕು ಸಮಿತಿಯ ವತಿಯಿಂದ ಗುರುವಾರ ನಗರದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದ ರಾಜ್ಯಪಾಲರು ಸಂವಿಧಾನಬದ್ಧವಾಗಿ ಕೆಲಸ ಮಾಡುವ ಬದಲಯ ಪಕ್ಷಪಾತಿಗಳಾಗಿದ್ದಾರೆ. ಕೇಂದ್ರದ ಸೂಚನೆ ಯಂತೆ ಕಾರ್ಯಾಚರಿಸುತ್ತಿದ್ದಾರೆ. ರಾಜ್ಯದಲ್ಲಿ ನಡೆದಿರುವ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರುವರು ಎಂದು ಆರೋಪಿ ಸಲಾದ ಬಿಜೆಪಿ ಮತ್ತು ಜನತಾ ದಳದ ನಾಯಕರ ಬಗ್ಗೆ ತನಿಖೆ ನಡೆಸಲು ರಾಜ್ಯಪಾಲರ ಅನುಮತಿಗಾಗಿ ರಾಜ್ಯಪಾಲರಿಗೆ ಬರೆದ ಅವಹಾಲುಗಳನ್ನು ವರ್ಷಗಟ್ಟಲೆ ಇಟ್ಟುಕೊಂಡು ಇದುವರೆಗೂ ಅನುಮತಿ ನೀಡದಿರುವುದು ರಾಜ್ಯಪಾಲರ ತಾರತ ಮ್ಯಕ್ಕೆ ಸಾಕ್ಷಿಯಾಗಿದೆ. ರಾಜ್ಯಪಾಲರ ಈ ಪಕ್ಷಪಾತ ನಡೆ ಖಂಡನೀಯ ಎಂದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಖರ್ ಬಿ. ಮಾತನಾಡಿದರು. ಸಿಪಿಐ ನಾಯಕರಾದ ವಿ.ಕುಕ್ಯಾನ್, ಪ್ರಭಾಕರ ರಾವ್, ಆರ್.ಡಿ. ಸೋನ್ಸ್, ಶಶಿಕಲಾ ಶಿವಾನಂದ, ಕೃಷ್ಣಪ್ಪವಾಮಂಜೂರು, ಸುಧಾಕರ ಕೆ., ಜಾನಕಿ ಉರ್ವ, ಸಂಜೀವಿ ಹಳೆಯಂಗಡಿ, ಗೀತಾ ಸುವರ್ಣ ಪಾಲ್ಗೊಂಡಿದ್ದರು. ತಾಲೂಕು ಸಹ ಕಾರ್ಯದರ್ಶಿ ತಿಮ್ಮಪ್ಪಕಾವೂರು ಸ್ವಾಗತಿಸಿದರು. ಕೋಶಾಧಿಕಾರಿ ಸುಲೋಚನ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News