ವಿವಾಹಿತೆ ನಾಪತ್ತೆ
Update: 2023-11-18 12:30 GMT
ಮಂಗಳೂರು, ನ.18: ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಫರಾನ್ಹಾ ಬಾನು (42) ಎಂಬಾಕೆ ನ.13ರಿಂದ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ಈಕೆಯನ್ನು 24 ವರ್ಷದ ಹಿಂದೆ ಎನ್‌ಪುರದ ಹಯಾತ್ ಎಂಬವರಿಗೆ ಮದುವೆ ಮಾಡಿಕೊಡಲಾಗಿದ್ದು, ಒಂದುವರೆ ವರ್ಷದಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರು. ಎರಡು ವಾರದ ಹಿಂದೆ ಹಯಾತ್‌ರ ಅನುಮತಿ ಪಡೆದು ಚಿಕಿತ್ಸೆಗಾಗಿ ಮಂಗಳೂರಿಗೆ ಕರೆತರಲಾಗಿತ್ತು. ನ.13ರಂದು ಬೆಳಗ್ಗೆ 7:30ರಿಂದ ಮನೆಯಿಂದ ಕಾಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
5.3 ಅಡಿ ಎತ್ತರದ, ಸಾಧಾರಣ ಶರೀರದ, ಗೋದಿ ಮೈಬಣ್ಣದ ಈಕೆ ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ. ಈಕೆಯನ್ನು ಕಂಡವರು ದೂ.ಸಂ: 0824-2220800/2220518/9480805339/9448221401ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.