ಎಂಆರ್‌ಪಿಎಲ್‌ ನೌಕರರ ಪ್ರತಿಭಟನೆ: ಜನಪ್ರತಿನಿಧಿಗಳ ಭೇಟಿ

Update: 2023-10-16 17:25 GMT

ಸುರತ್ಕಲ್, ಅ.16: ಇಲ್ಲಿನ ಕಾನ ಬಳಿ ಧರಣಿ ಸತ್ಯಾಗ್ರ ನಡೆಸುತ್ತಿರುವ ಎಂಆರ್ಪಿಎಲ್‌ ನೌಕರರ ಧರಣಿಯ ಸ್ಥಳಕ್ಕೆ ಹಲವು ರಾಜಕೀಯ ಮುಖಂಡರು ಭೇಟಿ ನೀಡಿ ಬೆಂಬಲ ಸೂಚಿಸಿದ್ದು, ಮುಷ್ಕರವನ್ನುಅಂತ್ಯಗೊಳಿಸಲಾಯಿತು.

ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರನ್ನು ಭೇಟಿಯಾಗಿ ಮಾತನಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ವೈ. ಭರತ್‌ ಶೆಟ್ಟಿ, ಭೂಮಿ ಕಳೆದುಕೊಂಡ ನೌಕರರಿಗೆ ನ್ಯಾಯಯುತ ವೇತನ, ಸೌಲಭ್ಯ ನೀಡುವುದು ಕಂಪೆನಿಗಳ ಜವಾಬ್ದಾರಿಯಾಗಿದೆ. ಬೃಹತ್ ಕಂಪೆನಿಗಳು ಬಂದರೆ ಸಹಜವಾಗಿ ಉದ್ಯೋಗ ಸಿಗುವ ಆಕಾಂಕ್ಷೆ ಇರುತ್ತದೆ. ಆದರೆ, ಸ್ಥಳೀಯರಿಗೆ ಉದ್ಯೋಗದಲ್ಲಾಗಲಿ, ವೇತನದಲ್ಲಾಗಲಿ ತಾರತಮ್ಯ ಮಾಡಬಾರದು. ಎಂಆರ್‍ಪಿಎಲ್ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಲು ಶಾಸಕ ಉಮಾನಾಥ ಕೊಟ್ಯಾನ್ ಅವರೊಂದಿಗೆ ಜೊತೆಯಾಗಲಿದ್ದೇನೆ. ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ ಅವರು ಭೇಟಿ ನೀಡಿ ಧರಣಿನಿರತರ ಅಹವಾಲು ಆಲಿಸಿದರು. ಅಲ್ಲದೇ, ಸ್ಥಳೀಯ ಉದ್ಯೋಗಿಗಳನ್ನು ವಂಚಿಸುತ್ತಿರುವ ಎಂಆರ್ಪಿಎಲ್‌ ಸಂಸ್ಥೆಯನ್ನು ತರಾಟೆಗೆ ತೆಗೆದು ಕೊಂಡರು. ನೌಕರರ ಬೇಡಿಕೆ ಈಡೇರುವವರೆಗೂ ತಮ್ಮ ಜೊತೆ ನಿಲ್ಲುವುದಾಗಿ ಮಿಥುನ್‌ ರೈ ಭರವಸೆ ನೀಡಿದರು.

ಧರಣಿಯ ಸ್ಥಳಕ್ಕೆ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್‌, ಬಿಜೆಪಿ ಮುಖಂಡರಾದ ಈಶ್ವರ್ ಕಟೀಲ್, ಸ್ಥಳೀಯ ಮನಪಾ ಸದಸ್ಯೆ ಸರಿತಾ ಶಶಿಧರ್, ಜಯಂತ್ ತೋಕೂರು, ಎಂಆರ್ಪಿಎಲ್ ಏರೊಮ್ಯಾಟಿಕ್ಸ್ ಕಾಂಪ್ಲೆಕ್ಸ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಸುಧೀರ್ ಕುಮಾರ್ ಮತ್ತು ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಒಂದೂವರೆ ವರ್ಷಗಳ ಹಿಂದೆ ಓಎಂಪಿಎಲ್‌ ಸಂಸ್ಥೆಯು ಎಂಆರ್ಪಿಎಲ್‌ ನೊಂದಿಗೆ ವಿಲೀನವಾಗಿದ್ದು. ಆ ಬಳಿಕದಿಂದ ಓಎಂಪಿಎಲ್‌ ನಿಂದ ಎಂಆರ್ಪಿಎಲ್‌ ಉದ್ಯೋಗಿಗಳಾದ ಸ್ಥಳೀಯ 293ಮಂದಿ ನೌಕರರಿಗೆ ಜೀವನ ಭದ್ರತೆ ಮತ್ತು ಸಮಾನ ವೇತನ ನೀಡದೇ ಎಂಆರ್ಪಿಎಲ್‌ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿ ಎಂಆರ್ಪಿಎಲ್ ಏರೊಮ್ಯಾಟಿಕ್ಸ್ ಕಾಂಪ್ಲೆಕ್ಸ್ ಎಂಪ್ಲಾಯಿಸ್ ಯೂನಿಯನ್ ಸುರತ್ಕಲ್‌ ಕಾನ ಬಳಿ ಎರಡು ದಿನಗಳ ಕಾಲ ನಡೆಸಿದ್ದ ಆಹೋರಾತ್ರಿ ಧರಣಿ ಸೋಮವಾರ ಮುಕ್ತಾಯಗೊಂಡಿರು.

ಮಂಗಳವಾರ ಎಂಆರ್ಪಿಎಲ್ ಏರೊಮ್ಯಾಟಿಕ್ಸ್ ಕಾಂಪ್ಲೆಕ್ಸ್ ಎಂಪ್ಲಾಯಿಸ್ ಯೂನಿಯನ್ ನ ಪಧಾಧಿಕಾರಿಗಳನ್ನು ಶಾಸಕ ಭರತ್‌ ಶೆಟ್ಟಿಯವರು ಜಿಲ್ಲಾಧಿಕಾರಿಯವರ ಕಚೇರಿಗೆ ಆಹ್ವಾನಿಸಿದ್ದಾರೆ. ನೌಕರರಿಗೆ ವಂಚಿಸಿರುವ ಮತ್ತು ಬಾಕಿ ವೇತನ ನೀಡುವ ಕುರಿತಾಗಿ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಬಳಿ ಎಂಆರ್ಪಿಎಲ್‌ ಸಂಸ್ಥೆಯೊಂದಿಗೆ ಚರ್ಚಿಸಿ ಸಮಸ್ಯ ಪರಿಹರಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದು ಎಂಆರ್ಪಿಎಲ್ ಏರೊಮ್ಯಾಟಿಕ್ಸ್ ಕಾಂಪ್ಲೆಕ್ಸ್ ಎಂಪ್ಲಾಯಿಸ್ ಯೂನಿಯನ್ ಅಧಯಕ್ಷ ಸುಧೀರ್‌ ಕುಮಾರ್‌ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News