ಮುಡಿಪು: ಯು.ಟಿ. ಖಾದರ್ ಹುಟ್ಟುಹಬ್ಬ ಪ್ರಯುಕ್ತ ಉಚಿತ ನೇತ್ರ ತಪಾಸಣೆ, ರಕ್ತದಾನ ಶಿಬಿರ
ಕೊಣಾಜೆ: ಕರ್ನಾಟಕ ವಿಧಾನಸಭೆಯ ಸ್ಪೀಕರ್, ಶಾಸಕ ಯು.ಟಿ. ಖಾದರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮುಡಿಪು ಬ್ಲಾಕ್ ಕಾಂಗ್ರೆಸ್ ಇದರ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಬೃಹತ್ ರಕ್ತದಾನ ಶಿಬಿರವು ಮುಡಿಪುವಿನ ಗೋಪಾಲಕೃಷ್ಣ ಸಭಾಭವನದಲ್ಲಿ ಗುರುವಾರ ನಡೆಯಿತು.
ಯು.ಟಿ ಖಾದರ್ ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು ಅವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಬೃಹತ್ ಗಾತ್ರದ ಕೇಕನ್ನ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ಮಂಗಳೂರಿನ ಬ್ಲಡ್ ಡೋನರ್ಸ್ ಮತ್ತು ಸಹಸಂಘಟನೆಗಳ ಆಶ್ರಯದಲ್ಲಿ ಈ ಬೃಹತ್ ಶಿಬಿರವನ್ನು ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು,ಸೇರಿದಂತೆ ನೂರಾರು ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ದರು. ಅಂಗನವಾಡಿ ಶಿಕ್ಷಕಿಯರು,ಕಾರ್ಯಕರ್ತೆಯರು ಸೇರಿದಂತೆ ಅನೇಕರು ಸ್ವಯಂ ಪ್ರೇರಿತರಾಗಿ ನೇತ್ರದಾನ ಮಾಡುವ ಪತ್ರಕ್ಕೆ ಸಹಿ ಹಾಕಿದರು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ ಸಮಾನ ಮನಸ್ಕರು ಸೇರಿ ನೆಚ್ಚಿನ ಶಾಸಕ ಸ್ಪೀಕರ್ ಖಾದರ್ ಅವರ ಹುಟ್ಟು ಹಬ್ಬ ಸಮಾರಂಭವನ್ನು ಆಯೋಜಿಸಿದ್ದು ಇದು ಯಾವುದೇ ರಾಜಕೀಯ ಮೇಲಾಟಕ್ಕಲ್ಲ. ಉಚಿತ ಶಿಬಿರಗಳು ಕಾಟಾಚಾರದ ಕಾರ್ಯಕ್ರಮವಾಗಬಾರದು, ಶಾಸಕರ ಹುಟ್ಟು ದಿನದ ಸುಸಂದರ್ಭದಲ್ಲಿ ಮಧ್ಯಮ ಮತ್ತು ಬಡ ವರ್ಗದವರಿಗೆ ಲಾಭ ಸಿಗಬೇಕೆಂಬ ಉದ್ದೇಶದಿಂದಲೇ ಇಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಹಾಗೂ ಚಿಕಿತ್ಸೆಯನ್ನೂ ಉಚಿತವಾಗಿ ನಡೆಸಲಾಗುವುದು ಎಂದರು.
ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಮುಖಂಡರಾದ ಇಬ್ರಾಹಿಂ ನಡುಪದವು, ದೇವದಾಸ ಭಂಡಾರಿ ಕುರ್ನಾಡು, ಎಸ್. ಕೆ. ಖಾದರ್, ನಾಗರಾಜ್, ಪದ್ಮನಾಭ ನರಿಂಗಾನ, ಹೈದರ್ ಕೈರಂಗಳ, ಸೀತಾರಾಮ ಶೆಟ್ಟಿ , ಮುರಳಿ, ರಹಿಮಾನ್ ಚಂದಹಿತ್ಲು, ಝುಬೈರ್ , ಅಬ್ದುಲ್ ರಝಾಕ್ ಕುಕ್ಕಾಜೆ, ನವಾಝ್, ಡಾ. ವೃಂದಾ, ಡಾ.ಸುರೇಖಾ ಉಪಸ್ಥಿತರಿದ್ದರು.
ಹೈದರ್ ಕೈರಂಗಳ ಸ್ವಾಗತಿಸಿದರು. ಅಬ್ದುಲ್ ಜಲೀಲ್ ಮೋಂಟುಗೋಳಿ ಕಾರ್ಯಕ್ರಮ ನಿರೂಪಿಸಿದರು.