ಫಾದರ್ ಮುಲ್ಲರ್‌ನಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ

Update: 2024-08-18 15:49 GMT

ಮಂಗಳೂರು, ಆ.18: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್, ಸೆಂಟ್ರಲ್ ಲೈಬ್ರರಿ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನ’ವನ್ನು ಶನಿವಾರ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಮಂಗಳೂರು ಸೈಂಟ್ ಆಗ್ನೆಸ್ ಕಾಲೇಜು (ಸ್ವಾಯತ್ತ) ಸೆಲೆಕ್ಷನ್ ಗ್ರೇಡ್ ಲೈಬ್ರರಿಯನ್ ಡಾ.ವಿಶಾಲಾ ಬಿ.ಕೆ. ಅವರು ಅವರು ಗ್ರಂಥಾಲಯ ವಿಜ್ಞಾನಗಳ ಪಿತಾಮಹ ದಿವಂಗತ ಡಾ. ಎಸ್.ಆರ್. ರಂಗನಾಥನ್ ಅವರ ಜೀವನದ ಒಂದು ನೋಟವನ್ನು ನೀಡಿದರು. ಸಂಶೋಧನೆಯಲ್ಲಿ ಹೊಸ ತಂತ್ರಜ್ಞಾನಗಳು ಮತ್ತು ಸಂಪನ್ಮೂಲ ಗಳನ್ನು ಬಳಸುವ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದರು. ಗ್ರಂಥಪಾಲಕರ ಸೇವೆಗಳನ್ನು ಅವರ ದಿನದಂದು ವಿವರಿಸಬೇಕು, ಸಾರ್ವಜನಿಕರು ಅಥವಾ ಬಳಕೆದಾರರು ಪುಸ್ತಕಗಳನ್ನು ನೀಡುವುದನ್ನು ಮಾತ್ರ ನೋಡುತ್ತಾರೆ, ಆದರೆ ನಿರ್ವಹಣೆ, ಕ್ಯಾಟಲಾಗ್ ಮಾಡುವುದು, ಪಟ್ಟಿ ಮಾಡುವುದು ಮತ್ತು ಸಂಗ್ರಹಿಸುವುದು ಗ್ರಂಥಪಾಲಕರು ಮಾಡುವ ಅನೇಕ ಕೆಲಸಗಳಲ್ಲಿ ಒಂದಾಗಿದೆ ಎಂದರು.

ಎಫ್‌ಎಂಎಂಸಿಯ ಆಡಳಿತಾಧಿಕಾರಿ ರೆ.ಫಾ.ಅಜಿತ್ ಬಿ.ಮಿನೇಜಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿನವೂ ತಪ್ಪದೆ ಓದುವ ಪುಸ್ತಕಗಳಿಂದ ಅವರಲ್ಲಿ ಹೊಸ ಚೈತನ್ಯ ಮೂಡುತ್ತದೆ ಎಂದರು.

ಇದೇ ಸಂದರ್ಭ ಆರೋಗ್ಯ ವಿಜ್ಞಾನಗಳ ಅಂತರ ಕಾಲೇಜು ಸಾಮಾನ್ಯ ಜ್ಞಾನ ರಸಪ್ರಶ್ನೆ ‘ಮುಲ್ಲರ್ ಲೈಬರ್ - 2024’ ನಡೆಯಿತು. ಈ ಕಾರ್ಯಕ್ರಮದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಆರೋಗ್ಯ ವಿಜ್ಞಾನ ಕಾಲೇಜುಗಳು ಭಾಗವಹಿಸಿದ್ದವು. ರಸಪ್ರಶ್ನೆ ವಿಜೇತರಿಗೆ ಬಹುಮಾನ, ಅತ್ಯುತ್ತಮ ಲೈಬ್ರರಿ ಬಳಕೆದಾರ ಪ್ರಶಸ್ತಿ, ಬಿಎಂಜೆ ರಿಸರ್ಚ್ ಟು ಪಬ್ಲಿಕೇಷನ್ ರೆಕಗ್ನಿಷನ್ ಪ್ರಶಸ್ತಿಯನ್ನು ನೀಡಲಾಯಿತು.

ಮುಲ್ಲರ್ ಲಿಬರ್ ರಸಪ್ರಶ್ನೆಯನ್ನು ಎಫ್‌ಎಂಎಂಸಿಯ ಪೀಡಿಯಾಟ್ರಿಕ್ಸ್ ಪ್ರಾಧ್ಯಾಪಕರು ಕ್ವಿಜ್ ಮಾಸ್ಟರ್ ಡಾ.ಅನಿಲ್ ಶೆಟ್ಟಿ ನಿರ್ವಹಿಸಿದರು. ಇಪ್ಪತ್ತೇಳು ಕಾಲೇಜುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಅಂತಿಮ ರಸಪ್ರಶ್ನೆಯಲ್ಲಿ 6 ತಂಡಗಳೊಂದಿಗೆ ಪ್ರಾಥಮಿಕ ಸುತ್ತುಗಳು ಮುಕ್ತಾಯಗೊಂಡವು.

ಪ್ರಥಮ ಬಹುಮಾನವನ್ನು ಎಜೆ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ದ್ವಿತೀಯ ಫಾದರ್ ಮುಲ್ಲರ್ ಕಾಲೇಜ್ ಆಫ್ ಫಿಸಿಯೋಥೆರಪಿ, ತೃತೀಯ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, 4ನೇ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್, 5ನೇ ಎನ್‌ಐಟಿಟಿಇ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಮತ್ತು 6ನೇ ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ಫಿಸಿಯೋಥೆರಪಿ ಪಡೆದುಕೊಂಡಿವೆ.

ಎಫ್‌ಎಂಎಂಸಿಎಚ್ ಆಡಳಿತಾಧಿಕಾರಿ ಫಾ ಜೀವನ್ ಸಿಕ್ವೇರಾ , ಎಚ್‌ಪಿಡಿ ಆಡಳಿತಾಧಿಕಾರಿ ಫಾ. ನೆಲ್ಸನ್ ಪೈಸ್, ಎಫ್‌ಎಂಎಂಸಿ ಡೀನ್ ಡಾ.ಆಂಟನಿ ಸಿಲ್ವನ್ ಡಿ’ಸೋಜ , ಮುಖ್ಯ ಗ್ರಂಥಪಾಲಕರಾದ ಡಾ.ಜಾನೆಟ್ ಡಾಟಿ ಲೋಬೋ, ಅಧ್ಯಾಪಕರು, ವಿದ್ಯಾರ್ಥಿಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೇಂದ್ರ ಗ್ರಂಥಾಲಯ ಸಮಿತಿಯ ಅಧ್ಯಕ್ಷ ಡಾ ಜಾನ್ ಜೆ.ಎಸ್. ಮಾರ್ಟಿಸ್ ಸ್ವಾಗತಿಸಿದರು, ಸಹಾಯಕ ಪ್ರಾಧ್ಯಾಪಕ ಸಾಂಡ್ರಾ ಜ್ಯೋತಿ ಸಲ್ಡಾನ್ಹಾ ವಂದಿಸಿದರು.

ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಬಯೋಕೆಮಿಸ್ಟ್ರಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅರ್ಚನಾ ಭಟ್, ಎಫ್‌ಎಂಎಂಸಿ ಪೆಥಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕ್ಲೌಡಿಯಾ ಜಾನಿ ಕಾರ್ಯಕ್ರಮ ನಿರ್ವಹಿಸಿದರು.






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News