ವೆನ್ಲಾಕ್‌ ತುರ್ತು ಚಿಕಿತ್ಸಾ ವಿಭಾಗ ಸ್ಥಳಾಂತರ

Update: 2024-09-19 13:38 GMT

ಮಂಗಳೂರು,ಸೆ.19: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿ ಚಿಕಿತ್ಸಾ ವಿಭಾಗದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ತುರ್ತು ಚಿಕಿತ್ಸಾ ವಿಭಾಗವನ್ನು ಹೊಸ ಸರ್ಜಿಕಲ್ ಬ್ಲಾಕ್‌ಗೆ ಸ್ಥಳಾಂತರಿಸಲಾಗಿದೆ.

ಗುರುವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವೆನ್ಲಾಕ್‌ಗೆ ಭೇಟಿ ನೀಡಿ ತುರ್ತುಚಿಕಿತ್ಸಾ ವಿಭಾಗವನ್ನು ವೀಕ್ಷಿಸಿದರು.ಈ ಕಟ್ಟಡವನ್ನು ಆ. 15ರಂದು ಉದ್ಘಾಟಿಸಲಾಗಿತ್ತು. ಸಾರ್ವಜನಿಕರು ತುರ್ತುಚಿಕಿತ್ಸಾ ವಿಭಾಗದ ಸೇವೆಗಾಗಿ ಹೊಸ ಸರ್ಜಿಕಲ್ ಬ್ಲಾಕ್‌ಗೆ ಭೇಟಿ ನೀಡುವಂತೆ ವೆನ್ಲಾಕ್ ಅಧೀಕ್ಷಕರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News