ಬೋಳಿಯಾರ್: ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮ

Update: 2024-09-19 14:17 GMT

ಕೊಣಾಜೆ: ಕರ್ನಾಟಕ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮ ನಿ. ಮಂಗಳೂರು, ದ.ಕ ಜಿಲ್ಲೆ ವತಿಯಿಂದ ಶಾಸಕ , ವಿಧಾನ ಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ನೇತೃತ್ವದಲ್ಲಿ ಬೋಳಿಯಾರು ಗ್ರಾಮದ ಅಲ್ಪ ಸಂಖ್ಯಾತ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮ ಬೋಳಿಯಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಅಲ್ಪ ಸಂಖ್ಯಾತ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಇದು ಸಾಮಾಜಿಕವಾದ ಸಬಲೀಕರಣದ ಯೋಜನೆಯಾಗಿದೆ, 2022 ರಲ್ಲಿ ಆಯ್ಕೆಯಾದವರಿಗೆ ಸಣ್ಣ ಸಾಲ 10,000 ಬಂದಿರುತ್ತದೆ, ಫಲಾನುಭವಿಗಳು ಇದನ್ನು ಸರಿಯಾಗಿ ವಿನಿಯೋಗಿಸಿ ಎಂದರು.

ಬೋಳಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಶಕೂರ್ ಬೋಳಿಯಾರು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರು, ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ.ಕೆ ಜಬ್ಬಾರ್,ಅಲ್ಪ ಸಂಖ್ಯಾತ ನಿಗಮದ ವ್ಯವಸ್ಥಾಪಕ ಯಶೋಧರ ಜೆ, ಪಂಚಾತ್ ಅಭಿವೃದ್ಧಿ ಅಧಿಕಾರಿ ಸುಧಾರಾಣಿ, ಬೋಳಿಯಾರು, ಬೋಳಿಯಸರು ಗ್ರಾಮ ಪಂಚಾಯತ್ ಸದಸ್ಯರಾದ ಸಿದ್ದೀಕ್, ಸತೀಶ್ ಆಚಾರ್ಯ, ಜಸಿಂತಾ ಪಿಂಟೋ, ಮೈಮೂನಾ , ಸಾಯಿದಾ ಬಾನು, ಮಾಜಿ ಸದಸ್ಯರಾದ ಎಂ ಎಸ್ ಯೂಸುಫ್, ರಿಯಾಝ್, ಅಬ್ದುಲ್ ಖಾದರ್, ಬೋಳಿಯಾರು ವಲಯ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್, ಉಪಾಧ್ಯಕ್ಷರಾದ ಉಮರ್ ಕುಕ್ಕೋಟು, ಟಿ.ಪಿ.ಜಬ್ಬಾರ್, ಹನೀಫ್ ಬಂಗ್ಲೆ ಮೊದಲಾದವರು ಉಪಸ್ಥಿತರಿದ್ದರು.

ಬೋಳಿಯಾರ್ ಸೌಹಾರ್ದತೆ: ಯು.ಟಿ. ಖಾದರ್ ಪ್ರಶಂಸೆ

ಬೊಳಿಯಾರ್ ಹಿಂದೆಯೂ ಸೌಹಾರ್ದತೆಯ ಪ್ರದೇಶ. ಮಿಲಾದ್ ರ್ಯಾಲಿಯಲ್ಲಿ ಹಿಂದೂ‌ ಬಾಂಧವರು ಸಿಹಿತಿಂಡಿ, ಪಾನೀಯ ವಿತರಿಸಿ ಸೌಹಾರ್ದತೆ ಮೆರೆದಿದ್ದಾರೆ ಎಂದು ಯು.ಟಿ.ಖಾದರ್ ಪ್ರಶಂಸೆ ವ್ಯಕ್ತ ಪಡಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News