ಇ-ಶ್ರಮ್ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್

Update: 2024-11-06 14:42 GMT

ಮಂಗಳೂರು,ನ.6: ಸುಪ್ರೀಂಕೋರ್ಟ್ ನಿರ್ದೇಶನದಂತೆ ಇ-ಶ್ರಮ್‌ನಲ್ಲಿ ನೋಂದಣಿಯಾದ ದ.ಕ.ಜಿಲ್ಲೆಯ ಅಸಂಘಟಿತ ಕಾರ್ಮಿಕರಲ್ಲಿ 4,818 ಬಿಪಿಎಲ್ ಕಾರ್ಡ್ ಇಲ್ಲದ ಕಾರ್ಮಿಕರನ್ನು ಗುರುತಿಸಿ ಈ ಪಟ್ಟಿಯಲ್ಲಿರುವ ಇ-ಶ್ರಮ್ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ ನೀಡುವ ಪ್ರಕ್ರಿಯೆಯನ್ನು ಆಹಾರ ಇಲಾಖೆ ಪ್ರಾರಂಭಿಸಿದೆ.

ಪಟ್ಟಿಯಲ್ಲಿರುವ ಗುರುತಿಸಿದ 4,818 ಅಸಂಘಟಿತರ್ಕಾುಕರಿಗೆರ್ಕಾುಕ ಇಲಾಖೆ/ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ/ಗ್ರಾಮ ಒನ್/ಮಂಗಳೂರು ಒನ್‌ಗಳ ಸಿಬ್ಬಂದಿಗಳು ದೂರವಾಣಿ ಕರೆ ಮಾಡಿ ಮಾಹಿತಿ ನೀಡುತ್ತಿದ್ದಾರೆ.

ಅರ್ಹ ಕಾರ್ಮಿಕರು ಬಿಪಿಎಲ್ ಕಾರ್ಡ್ ಪಡೆಯಲು ಹತ್ತಿರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ/ತಾಲೂಕು ಕಚೇರಿಯಲ್ಲಿರುವ ಆಹಾರ ನಿರೀಕ್ಷಕರು/ಗ್ರಾಮ ಒನ್/ಮಂಗಳೂರು ಒನ್‌ಗಳಲ್ಲಿ ಕೂಡಲೇ ಸಂಪರ್ಕಿಸಿ ಪಡಿತರ ಚೀಟಿ ಪಡೆದುಕೊಳ್ಳಲು ತಿಳಿಸಲಾಗಿದೆ.

ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಟ್ಯಾಕ್ಸ್ ಪಾವತಿಸಿದ ರಶೀದಿ/ಬಾಡಿಗೆಕರಾರು ಮತ್ತು ಇ-ಶ್ರಮ್ ಕಾರ್ಡ್ ತೆಗೆದುಕೊಂಡು ಹೋಗುವಂತೆ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 1967 ಅಥವಾ ದೂರವಾಣಿ ಸಂಖ್ಯೆ 1800 425 9339ನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಉಪವಿಭಾಗ ಕಾರ್ಮಿಕ ಅಧಿಕಾರಿ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News