ಸುಳ್ಯ: ಓಮ್ನಿ ಢಿಕ್ಕಿ; ರಿಕ್ಷಾ ಚಾಲಕ ಮೃತ್ಯು

Update: 2023-11-05 17:22 GMT

ಸುಳ್ಯ: ಹಳೆಗೇಟಿನಲ್ಲಿ ಓಮ್ನಿ ಕಾರು ಮತ್ತು ಅಟೋರಿಕ್ಷಾ ಮಧ್ಯೆ ಅಪಘಾತ ಸಂಭವಿಸಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ನ.5 ರಂದು ರಾತ್ರಿ ಸಂಭವಿಸಿದೆ.

ರಿಕ್ಷಾ ಚಾಲಕ ಜಾಲ್ಸೂರು ಗ್ರಾಮದ ಬಾಬು ಪಾಟಾಳಿ ಎಂಬವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಕರೆ ತರಲಾಗಿದ್ದರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಜಾಲ್ಸೂರಿನಿಂದ ಸುಳ್ಯಕ್ಕೆ ಪ್ರಯಾಣಿಕರೋರ್ವರನ್ನು ಬಿಟ್ಟು ಹಿಂತಿರುಗುತ್ತಿದ್ದ ಅಟೋರಿಕ್ಷಾ ಮತ್ತು ಎದುರಿನಿಂದ ಬರುತ್ತಿದ್ದ ಓಮ್ನಿ ಮಧ್ಯೆ ಅಪಘಾತ ಸಂಭವಿಸಿದೆ. ಸಹ ಪ್ರಯಾಣಿಕರೋರ್ವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News