ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು: ಯು.ಟಿ.ಖಾದರ್
ಕೊಣಾಜೆ: ಮಜ್ಲಿಸ್ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮುಡಿಪುವಿನಲ್ಲಿ 100 ಕ್ಕೂ ಹೆಚ್ಚು ಮಂದಿಗೆ ಕೃತಕ ಕಾಲು ಜೋಡಣಾ ಬೃಹತ್ ಶಿಬಿರವು ಮುಡಿಪುವಿನ ಮಜ್ಲಿಸ್ ಎಜು ಪಾರ್ಕ್ ನಲ್ಲಿ ಶುಕ್ರವಾರ ನಡೆಯಿತು.
ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸುತ್ತಮತ್ತಲಿನ ಸರ್ವ ಧರ್ಮದ ನ್ಯೂನ್ಯತೆ ಇರುವ ನೂರಕ್ಕೂ ಹೆಚ್ಚುಮಂದಿಗೆ ಕೃತಕ ಕಾಲು ಜೋಡನೆಯ ಈ ಕಾರ್ಯಕ್ರಮವು ಮಾನವೀಯತೆಯ, ಕರುಣೆಯ ಮತ್ತು ಪುಣ್ಯದ ಕಾರ್ಯಕ್ರಮವಾಗಿದೆ. ಸಂಘಟನೆಗಳು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಎಜ್ಯು ಪಾರ್ಕ್ ಮೂಲಕ ಇವತ್ತು ಯಾವುದೇ ಅಪೇಕ್ಷೆ ಇಲ್ಲದೆ ಸಮಾಜಸೇವೆಯ ಮೂಲಕ ಸಮಾಜಮುಖಿಯಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.
ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಝೀರ್ ಅಹ್ಮದ್ ಅವರು ಮಾತನಾಡಿ, ಇದೊಂದು ಸಮಾಜಮುಖಿಯಾದ ಕಾರ್ಯಕ್ರಮವಾಗಿದೆ. ನಿಜವಾಗಿಯೂ ಇದೊಂದು ಸೇವೆಯಾಗಿದೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯು ವಂತಾಗಲಿ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಶರಫುಸ್ಸಾದಾತ್ ಸಯ್ಯದ್ ಆದೂರು ತಂಙಳ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ಶಿಯಾಬುದ್ದೀನ್ ತಂಙಳ್ ತಲೆಕ್ಕಿ, ಡಾ. ತುಂಬೆ ಮೊಯ್ದಿನ್, ಡಾ.ಯು.ಟಿ.ಇಪ್ತಿಖಾರ್, ಉಳ್ಳಾಲ ದರ್ಗಾ ಅಧ್ಯಕ್ಷರಾದ ಹನೀಫ್ ಹಾಜಿ , ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ಬೋಳಿಯಾರ್, ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ, ಅಬ್ದುಲ್ ಜಲೀಲ್ ಮೊಂಟೆಪದವು, ಅಬ್ದುಲ್ ನಾಸೀರ್ ನಡುಪದವು, ಇನಾಯತ್ ಆಲಿ ಭಟ್ಕಲ್, ಬೆಂಗಳೂರಿನ ಪ್ರೆಸಿಡೆನ್ಸಿ ವಿವಿಯ ಕುಲಪತಿ ನಿಸಾರ್ ಅಹ್ಮದ್ , ಮುಖಂಡರಾದ ವಿನಾಯಕ್, ಸ್ವಾಗತ ಸಮಿತಿ ಅಧ್ಯಕ್ಷ ಎಸ್ ಕೆ ಅಬ್ದುಲ್ ಖಾದರ್, ಮುಡಿಪು ಎಜುಪಾರ್ಕ್ ನ ನಿರ್ದೇಶಕ ಜಲಾಲುದ್ದೀನ್ ತಂಙಳ್ , ಎಸ್ ವೈಎಸ್ ನ ರಾಜ್ಯ ಪದಾಧಿಕಾರಿ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ , ಸ್ವಾಗತ ಸಮಿತಿ ಸಂಚಾಲಕ ಬಶೀರ್ ಮುಡಿಪು ಮೊದಲಾದವರು ಉಪಸ್ಥಿತರಿದ್ದರು.
ಮಹಮ್ಮದ್ ಮಿರಾಜ್ ಕಾರ್ಯಕ್ರಮ ನಿರೂಪಿಸಿದರು.