ಪಣಂಬೂರು: ನೂತನ ಖಾಝಿಯಾಗಿ ಎ.ಪಿ. ಉಸ್ತಾದ್ ಅಧಿಕಾರ ಸ್ವೀಕಾರ
Update: 2024-08-12 12:12 GMT
ಸುರತ್ಕಲ್: ಇಲ್ಲಿನ ಪಣಂಬೂರು ಮುಸ್ಲಿಂ ಜಮಾಅತ್ (ರಿ) ಮುಹಿಯುದ್ದೀನ್ ಜುಮಾ ಮಸೀದಿ 2ನೇ ಬ್ಲಾಕ್ ಕಾಟಿಪಳ್ಳ ಇದರ ನೂತನ ಖಾಝಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕರ್ ಮುಸ್ಲಿಯಾರ್ ಅವರು ನೇಮಕ ಗೊಂಡಿದ್ದಾರೆ.
ಕೇರಳದ ಕ್ಯಾಲಿಕಟ್ ಮರ್ಕಝ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಮಾಅತ್ ಅಧ್ಯಕ್ಷರಾದ ಹಾಜಿ ಎಸ್ . ರಹ್ಮತುಲ್ಲಾ ಅವರ ಸಮ್ಮುಖದಲ್ಲಿ ಕಾಟಿಪಳ್ಳ ಮೊಹಲ್ಲಾದ ಖಾಝಿಯಾಗಿ ಎಪಿ ಅಬೂಬಕರ್ ಮುಸ್ಲಿಯಾರ್ ಅವರು ಬೈಅತ್ ನಿರ್ವಹಿಸಿದರು.
ಈ ಸಂದರ್ಭ ಪಣಂಬೂರು ಮುಸ್ಲಿಂ ಜಮಾಅತ್ ಖತೀಬರಾದ ಅಬ್ದುನ್ನಾಸಿರ್ ಮದನಿ, ಸದರ್ ಉಸ್ತಾದ್ ತಶ್ರೀಫ್ ಸಖಾಫಿ, ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ (ಅಬ್ಬು), ಉಪಾಧ್ಯಕ್ಷರಾದ ದಾವೂದ್, ಕೋಶಾಧಿಕಾರಿ ಅಬೂಬಕ್ಕರ್ ಕೈಕಂಬ, ಸದಸ್ಯರಾದ ಮುಹಮ್ಮದ್ ಸಮೀರ್, ಅಬ್ದುಲ್ ಖಾದರ್ ಬಾವ ಉಪಸ್ಥಿತರಿದ್ದರು.