ಪುತ್ತೂರು: ಬಸ್ಸಿನಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ; ಆರೋಪಿ ಬಂಧನ

Update: 2023-09-08 16:39 GMT

ಸುಳ್ಯ: ಪುತ್ತೂರಿನಿಂದ ಕಾಣಿಯೂರು ಕಡೆಗೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮಹಿಳೆಯೋರ್ವರು ಪ್ರಯಾಣಿಸುತ್ತಿದ್ದ ಸಂದರ್ಭ ಯುವಕನೋರ್ವ ಅನುಚಿತವಾಗಿ ವರ್ತಿಸಿದ್ದು, ಈ ಬಗ್ಗೆ ಮಹಿಳೆ ದ.ಕ.ಜಿಲ್ಲಾ ಪೊಲೀಸ್ ಟ್ವಿಟರ್ ಖಾತೆಗೆ ಟ್ವೀಟ್ ಮೂಲಕ ದೂರು ನೀಡಿದ್ದರು.

ದೂರಿಗೆ ಸ್ಪಂದಿಸಿದ ಪೊಲೀಸರು ಆರೋಪಿ ಕಾಸರಗೋಡಿನ ವಿಷ್ಣು ಮೋಹನ್ ಎಂಬಾತನನ್ನು ಬಂಧಿಸಿದ್ದಾರೆ.

ಮಹಿಳೆಯು ಪುತ್ತೂರು ನಗರದಿಂದ ಸುಳ್ಯ ತಾಲೂಕಿನ ನಿಂತಿಕಲ್ಲು ಎಂಬಲ್ಲಿಗೆ ಸಂಜೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಬಸ್ಸಿನಲ್ಲಿ ಯುವಕ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದ ಎನ್ನಲಾಗಿದೆ.

ಯುವಕ ತನ್ನ ಮೊಬೈಲ್ ನಂಬರ್‌ ನೀಡಿ, ಕರೆ ಮಾಡುವಂತೆ ಕೈಸನ್ನೆಯಲ್ಲಿ ತಿಳಿಸಿ ಸವಣೂರು ಎಂಬಲ್ಲಿ ಬಸ್ಸಿನಿಂದ ಇಳಿದು ಹೋಗಿದ್ದ. ಈ ಬಗ್ಗೆ ಮಹಿಳೆಯು ಟ್ವೀಟ್ ಮೂಲಕ ಪೊಲೀಸರಿಗೆ ದೂರು ನೀಡಿದ್ದರು.‌ ಬೆಳ್ಳಾರೆ ಪೊಲೀಸರು ಮಹಿಳೆಯನ್ನು ಸಂಪರ್ಕಿಸಿ ದೂರು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು.

ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ದ.ಕ.ಜಿಲ್ಲಾ ಪೊಲೀಸ್ ಟ್ವಿಟರ್ ಖಾತೆಯಿಂದ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News