ದೇಶ ಬಲಿಷ್ಠವಾಗಬೇಕಾದರೆ ವಿದ್ಯಾರ್ಥಿ ಸಮೂಹ ಬಲಿಷ್ಠವಾಗಬೇಕು : ಸ್ಪೀಕರ್ ಯು.ಟಿ.ಖಾದರ್

Update: 2024-06-16 09:09 GMT

ಬಂಟ್ವಾಳ : ದೇಶ ಬಲಿಷ್ಠವಾಗಬೇಕಾದರೆ ವಿದ್ಯಾರ್ಥಿ ಸಮೂಹ ಬಲಿಷ್ಠವಾಗಬೇಕು ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ ಇದರ ಇಖ್ವಾ ಎಜುಕೇಶನಲ್ ರಿಸರ್ಚ್ ಆಂಡ್ ಡೆವಲಪ್‌ ಮೆಂಟ್ ಸೆಂಟರ್ ಕಚೇರಿ ಉದ್ಘಾಟನೆಯ ಬಳಿಕ ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಂನಲ್ಲಿ ನಡೆದ ಸನ್ಮಾನ ಹಾಗೂ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಾಣಿ ಪರಿಸರದ ಹಿರಿಯರಾದ ಮರ್ಹೂಮ್ ಹಾಜಿ ಬಿ.ಹುಸೈನ್ ಸುಲ್ತಾನ್, ಮುಹಮ್ಮದ್ ಹಾಜಿ ರಾಜ್ ಕಮಲ್, ಉಸ್ಮಾನ್ ಹಾಜಿ ಮಿತ್ತೂರು, ಹಾಜಿ ಅಬ್ದುಲ್ ಖಾದರ್ ಗೋಳ್ತಮಜಲು ಸಮಾಜಕ್ಕೆ ನೀಡಿದ ಅನನ್ಯ ಕೊಡುಗೆಯನ್ನು ನೆನಪಿಸಿಕೊಂಡ ಅವರು ಇದಕ್ಕೆ ಪೂರಕವಾಗಿ ಮತ್ತು ಇನ್ನಷ್ಟು ಪರಿಣಾಮಕಾರಿಯಾಗಿ ಸೋಶಿಯಲ್ ಇಖ್ವಾ ಫೆಡರೇಶನ್ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್.ಮುಹಮ್ಮದ್ ಮಾತನಾಡಿ, ಭಾರತದ ಮುಸ್ಲಿಂ ಸಮುದಾಯದ ಜನತೆ ರಾಷ್ಟ್ರ ಪ್ರೇಮವನ್ನು ರಕ್ತಗತವಾಗಿ ಮೈಗೂಡಿಸಿಕೊಂಡು ಬಂದಿದ್ದು, ಈ ಸಮುದಾಯದ ಮಕ್ಕಳು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬೇಕಾಗಿದೆ. ಮಕ್ಕಳ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವ ಸೋಶಿಯಲ್ ಇಖ್ವಾ ಫೆಡರೇಶನ್ ರಾಜ್ಯ , ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಹಾರೈಸಿದರು.

ಮುಸ್ಲಿಂ ಸೆಂಟ್ರಲ್ ಕಮಿಟಿ ಸದಸ್ಯ ಹನೀಫ್ ಖಾನ್ ಕೊಡಾಜೆ ಮಾತನಾಡಿ, ಸಾಮಾಜಿಕ ಹೊಣೆಗಾರಿಕೆಗೆ ಎಲ್ಲಾ ಜಮಾಅತ್ ಕಮಿಟಿಗಳು ಕೈಜೋಡಿಸಿ ಒಂದಾಗಿ ಯೋಜನೆಗಳನ್ನು ರೂಪಿಸಬೇಕೆಂದು ಮನವಿ ಮಾಡಿದರು.

ಸಾಮಾಜಿಕ ಹೋರಾಟಗಾರ್ತಿ ನಜ್ಮಾ ಚಿಕ್ಕನೇರಳೆ ಮಾತನಾಡಿ, ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದ ಕಾರಣದಿಂದಲೇ ಬಹಳಷ್ಟು ದೌರ್ಜನ್ಯ, ಅವಮಾನಗಳನ್ನು ಅನುಭವಿಸುತ್ತಿದ್ಧಾರೆ. ನಾವು ಘನತೆಯಿಂದ ಬದುಕಬೇಕಾದ್ರೆ ಶಿಕ್ಷಣದಿಂದ ಮಾತ್ರ ಸಾಧ್ಯ ಅಂದರು.

ಅಜಿಲಮೊಗರು ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಬಿ ಅಬ್ದುಲ್ ಹಮೀದ್, ಬರಾಕ ಇಂಟರ್ ನ್ಯಾಷನಲ್ ಸ್ಕೂಲ್ ಚೇರ್‌ಮನ್  ಮುಹಮ್ಮದ್ ಅಶ್ರಫ್, ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು, ಬೆಂಗಳೂರು ಬ್ಯಾರೀಸ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಶಬೀರ್ ಬ್ರಿಗೇಡ್, ದ.ಕ.ಮಸ್ಲಿಂ ಜಸ್ಟಿಸ್ ಫಾರಂ ಅದ್ಯಕ್ಷ ಇರ್ಷಾದ್ ಯು ಟಿ, ಉಮರ್ ಹಾಜಿ ರಾಜ್ ಕಮಲ್, ಹಾಜಿ ಅಹಮದ್ ಖಾನ್ ಕೊಡಾಜೆ, ಹಾಜಿ ಮುಹಮ್ಮದ್ ರಫೀಕ್ ಸುಲ್ತಾನ್, ಪತ್ರಕರ್ತ ಲತೀಫ್ ನೇರಳಕಟ್ಟೆ, ದ.ಕ.ಜಿಲ್ಲಾ ಮದರಸ ಮೆನೇಜ್‌ಮೆಂಟ್ ಕಾರ್ಯದರ್ಶಿ ಎಸ್.ಎಂ. ರಫೀಕ್ ಹಾಜಿ ನೇರಳಕಟ್ಟೆ ಅತಿಥಿಗಳಾಗಿ ಭಾಗವಹಿಸಿದ್ದರು.

ವಿವಿಧ ಮಸೀದಿ ಅಧ್ಯಕ್ಷರುಗಳಾದ ಹಾಜಿ ಇಬ್ರಾಹಿಂ ರಾಜ್ ಕಮಲ್ ಕೊಡಾಜೆ, ಕೆ.ಬಿ.ಸಲೀಂ ಹಾಜಿ ಮಿತ್ತೂರು , ರಿಯಾಝ್ ಕಲ್ಲಾಜೆ ಗಡಿಯಾರ, ಹಾಜಿ ಇಬ್ರಾಹಿಂ ಬಾತಿಶಾ ಪಾಟ್ರಕೋಡಿ, ಉಮ್ಮರ್ ಫಾರೂಕ್ ನೀರಪಾದೆ, ನಝೀರ್ ಪೆರ್ಲಾಪು, ಕೆ.ಎಸ್ ಮಹಮ್ಮದ್ ಕೆಮ್ಮಾನ್, ಅಬ್ದುಲ್ ರಹ್ಮಾನ್ ನೆಚ್ಚಬೆಟ್ಟು, ಹೈದರ್ ಪರ್ಲೊಟ್ಟು, ಮುಹಮ್ಮದ್ ಅಶ್ರಫ್ ಸತ್ತಿಕಲ್ಲು, ಹಾಜಿ ಅಬ್ದುಲ್ ಹಮೀದ್ ಸೂರಿಕುಮೇರು, ಮೊದಲಾದವರು ಉಪಸ್ಥಿತರಿದ್ಧರು.

ಇದೇ ವೇಳೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಹೈಕೋರ್ಟ್ ವಕೀಲರಾದ ಮುಝಫರ್ ಅಹ್ಮದ್ , ಯುವ ಉದ್ಯಮಿ ಅಬ್ದುಲ್ ಲತೀಫ್ ಗುರುಪುರ, ಇಖ್ವಾ ಆಂಬುಲೆನ್ಸ್ ಚಾಲಕ ಸಂಶೀರ್ ಶೇರಾ ಇವರನ್ನು ಸನ್ಮಾನಿಸಲಾಯಿತು

ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ತಮೀಮ್ ಕೆ, ಯುಪಿಎಸ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಶಬೀರ್ ಪಾಟ್ರಕೋಡಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಸೋಶಿಯಲ್ ಇಖ್ವಾ ಫೆಡರೇಶನ್ ಅಧ್ಯಕ್ಷ ಅಬ್ದುಲ್ ರಹೀಂ ಸುಲ್ತಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು. ಪ್ರಧಾನ ಕಾರ್ಯದರ್ಶಿ ಜೈನುಲ್ ಅಕ್ಬರ್ ಕಡೇಶ್ವಾಲ್ಯ ಪ್ರಸ್ತಾವನೆಗೈದು ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ನವಾಝ್ ಭಗವಂತಕೋಡಿ ವಂದಿಸಿ, ಅಬ್ದುಲ್ ಅಝೀಝ್ ಗಡಿಯಾರ ಕಾರ್ಯಕ್ರಮ ನಿರೂಪಿಸಿದರು.

Delete Edit
Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News