ಇ-ಲೆಜಿಸ್ಲೇಚರ್ ಅಧ್ಯಯನ ಮಾಡಿ ಜಾರಿಗೊಳಿಸುವ ಚಿಂತನೆ : ಯು.ಟಿ.ಖಾದರ್

Update: 2023-11-20 17:30 GMT

ಮಂಗಳೂರು : ಇ-ಲೆಜಿಸ್ಲೇಚರ್ (ಇ-ವಿಧಾನ ಯೋಜನೆ)ಅನ್ನು ಅಧ್ಯಯನ ಮಾಡಿ ಕರ್ನಾಟಕ ವಿಧಾನ ಮಂಡಲದಲ್ಲಿ ಜಾರಿಗೊಳಿಸುವ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ಫರೀದ್ ಹೇಳಿದ್ದಾರೆ.

ಹೊಸದಿಲ್ಲಿಯ ಸಂಸತ್ತಿನಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಭೇಟಿಯಾದರು.

ಲೋಕಸಭೆಯ ಸೆಕ್ರೆಟರಿ ಜನರಲ್ ಉತ್ಪಲ್ ಕುಮಾರ್ ಸಿಂಗ್, ರಾಜ್ಯಸಭೆಯ ಸೆಕ್ರೆಟರಿ ಜನರಲ್ ಪ್ರಮೋದ್ ಚಂದ್ರ ಮೋದಿ ಹಾಗೂ ಸಭಾಧ್ಯಕ್ಷ ರಾಮ್ ನಿವಾಸ್ ಗೋಯಲ್ ಅವರನ್ನು ದಿಲ್ಲಿಯಲ್ಲಿ ವಿಧಾನಸಭೆಯಲ್ಲಿ ಭೇಟಿ ಮಾಡಿದರು .

ಈ ಸಂದರ್ಭದಲ್ಲಿ ವಿಧಾನ ಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಹಾಗೂ ವಿಧಾನ ಪರಿಷತ್ ಕಾರ್ಯದರ್ಶಿ ಕೆ .ಆರ್.ಮಹಾಲಕ್ಷ್ಮೀ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News