ಸುಳ್ಯ : ವಿದ್ಯುತ್ ಶಾಕ್ ಹೊಡೆದು ಮಹಿಳೆ ಮೃತ್ಯು
Update: 2023-10-08 15:24 GMT
ಸುಳ್ಯ: ಮನೆಗೆ ಅಳವಡಿಸಿದ್ದ ಇನ್‍ವರ್ಟರ್ ಪ್ಲಗ್ ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಮ್ಮಾರಿನಲ್ಲಿ ಶನಿವಾರ ರಾತ್ರಿ ನಡೆದಿದೆ.
ಬೊಮ್ಮಾರಿನ ಬಾಬು ಕುಲಾಲ್ ಎಂಬವರ ಪತ್ನಿ ಲಲಿತಾ (55) ಮೃತರು. ಲಲಿತಾ ರವರು ಪ್ರತಿ ದಿನ ರಾತ್ರಿ ಮಲಗುವ ಸಮಯದಲ್ಲಿ ಇನ್‍ವರ್ಟರ್‍ಗೆ ವಿದ್ಯುತ್ ಸಂಪರ್ಕಿಸುವ ಪ್ಲಗ್‍ನ್ನು ತೆಗೆದು ಮಲಗುತ್ತಿದ್ದರು. ಶನಿವಾರ ರಾತ್ರಿಯೂ ಸುಮಾರು 10 ಗಂಟೆಯ ವೇಳೆಗೆ ಪ್ಲಗ್ ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಅವರನ್ನು ಸುಳ್ಯ ಆಸ್ಪತ್ರೆಗೆ ಸಾಗಿಸಲಾಯಿತದರೂ ಅವರು ಮೃತಪಟ್ಟರು. ಮೃತರು ಪತಿ, ಇಬ್ಬರು ಪುತ್ರರು ಇದ್ದಾರೆ.