ಸುರತ್ಕಲ್: ಆ.5ರಂದು ಸುಟ್ಟಗಾಯಗಳಿಗೆ ಚಿಕಿತ್ಸಾ ಘಟಕ ಉದ್ಘಾಟನೆ
ಮಂಗಳೂರು, ಆ.3: ಸುರತ್ಕಲ್‌ನ ಮುಕ್ಕದಲ್ಲಿರುವ ಶ್ರೀನಿವಾಸ ಆಸ್ಪತ್ರೆಯಲ್ಲಿ ಆರಂಭಿಸಲಾಗುವ ಸುಟ್ಟಗಾಯಗಳಿಗೆ ಚಿಕಿತ್ಸಾ ಘಟಕ ಉದ್ಘಾಟನೆ ಆ.5ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡೇವಿಡ್ ಡಿ.ಎಂ.ರೊಸಾರಿಯೊ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಟ್ಟಗಾಯಗಳ ಘಟಕವು 2 ಐಸಿಯು ಬೆಡ್‌ಗಳು, 2 ಸ್ಟೆಪ್ ಡೌನ್ ಐಸಿಯು ಮತ್ತು 4 ಮಾನಿಟರಿಂಗ್ ಯೂನಿಟ್‌ಗಳನ್ನು ಒಳಗೊಂಡಿದೆ ಎಂದರು.
ಎಲ್ಲಾ ರೀತಿಯ ಸುಟ್ಟಗಾಯಗಳಿಗೆ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.ಯಾವುದೇ ಸುಟ್ಟಗಾಯಗಳು ಮತ್ತು ಆಘಾತಕಾರಿ ರೋಗಿಗಳನ್ನು ನಿಭಾಯಿಸಲು ಸಶಕ್ತವಾಗಿದೆ. ಸುಟ್ಟಗಾಯಗಳು ಸೇರಿದಂತೆ ಎಲ್ಲಾ ಗಾಯಗಳಿಗೆ ಚಿಕಿತ್ಸೆ ನೀಡಲಾಗುವುದು
ಶ್ರೀನಿವಾಸ್ ಆಸ್ಪತ್ರೆಯು 750 ಕ್ಕೂ ಹೆಚ್ಚು ಹಾಸಿಗೆಗಳನ್ನು ಒಳಗೊಂಡಿರುವ ಎಲ್ಲಾ ಸ್ಪೆಷಾಲಿಟಿ ಮತ್ತು ಸೂಪರ್-ಸ್ಪೆಷಾಲಿಟಿ ಸೇವೆ ಅಕಾಡೆಮಿಕ್ಸ್, ಶ್ರೀನಿವಾಸ್ ವಿಶ್ವವಿದ್ಯಾಲಯಗಳನ್ನು ಪೂರೈಸುತ್ತಿದೆ ಎಂದು ರೊಸಾರಿಯೊ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ವಿವಿ ರಿಜಿಸ್ಟ್ರಾರ್ ಡಾ.ಅನಿಲ್ ಕುಮಾರ್ ಆಸ್ಪತ್ರೆಯ ಮ್ಯಾನೇಜರ್ ಫ್ರೀಡಾ ಡಿಸೋಜ ಉಪಸ್ಥಿತರಿದ್ದರು.