ಉಳ್ಳಾಲ: ಹಳೆಕೋಟೆ ಸಯ್ಯದ್ ಮದನಿ ವಿದ್ಯಾ ಸಂಸ್ಥೆಯಲ್ಲಿ ವನಮಹೋತ್ಸವ ಕಾರ್ಯಕ್ರಮ

Update: 2023-07-15 04:39 GMT

ಉಳ್ಳಾಲ: ಹಳೆಕೋಟೆ ಸಯ್ಯದ್ ಮದನಿ ವಿದ್ಯಾ ಸಂಸ್ಥೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಗುರುವಾರ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಮತ್ತು ಉಳ್ಳಾಲ ನಗರಸಭೆ ಆಯುಕ್ತರಾದ ಶ್ರೀಮತಿ ವಾಣಿ ಆಳ್ವ ಗಿಡನಡುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ಗಿಡಮರಗಳನ್ನು ಬೆಳೆಸುವುದರಿಂದ ಸರಿಯಾದ ಸಮಯಕ್ಕೆ ಮಳೆ ಬರುತ್ತದೆ, ಗಿಡಗಳನ್ನು ನೆಟ್ಟು ಅದನ್ನು ಪೋಷಿಸಬೇಕು. ಈ ಭೂಮಿ ತನ್ನ ಸ್ಥಿರತೆಯನ್ನು ಕಾಪಾಡಲು ಮರಬೆಳೆಸಬೇಕು. ಇಲ್ಲದಿದ್ದರೆ ಉಷ್ಣಾಂಶ ಜಾಸ್ತಿಯಾಗಿ ಭೂಮಿ ಬರಡಾಗುತ್ತದೆ. ನಮ್ಮ ಸುತ್ತಮುತ್ತಲಿನ ಬೆಟ್ಟ ಗುಡ್ಡ, ಮಣ್ಣು, ಎಲ್ಲಾ ಕಡೆ ದೇವರಿರುತ್ತಾರೆ, ಆದ್ದರಿಂದ ನಾವು ಪ್ರಕೃತಿಯನ್ನು ಪ್ರೀತಿಸಬೇಕು ಎಂದರು.

ಉಳ್ಳಾಲ ನಗರ ಸಭೆ ಆಯುಕ್ತರಾದ ವಾಣಿ ಆಳ್ವ ಮಾತನಾಡಿ ಕಳೆದ ಬಾರಿ ಉಳ್ಳಾಲ ನಗರ ಸಭೆಯಿಂದ ಸೆಕೆಗಾಲದಲ್ಲಿ ಮನೆಮನೆಗೆ ನೀರು ಒದಗಿಸಲು 3 ಟ್ಯಾಂಕರ್ ಅನ್ನು ಉಪಯೋಗಿಸಿದ್ದೆವು, ಆದರೆ ಈ ಬಾರಿ 12 ಟ್ಯಾಂಕರನ್ನು ನೀರಿಗಾಗಿ ಉಪಯೋಗಿಸಿದ್ದೇವೆ. ಆದ್ದರಿಂದ ನಾವು ಹೆಚ್ಚು ಗಿಡಮರಗಳನ್ನು ನೆಟ್ಟು ಪೋಷಿಸಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ನಗರಸಭೆ ಆಯುಕ್ತ ವಾಣಿ ಆಳ್ವ, ಉಳ್ಳಾಲ ದರ್ಗಾ ಸಮಿತಿ ಸದಸ್ಯರಾದ ಫಾರೂಕ್ ಯು.ಎಚ್ ಅವರನ್ನು ಸನ್ಮಾನಿಸಲಾಯಿತು. ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಳ್ಳಾಲ ವತಿಯಿಂದ ಶಾಲಾ ಟೇರಸ್ ಮೇಲೆ ಪರಿಸರ ಕಾರ್ಯಕ್ರಮದಡಿ ಶಾಲಾ ಕೈತೋಟಕ್ಕೆ ಚಾಲನೆ ನೀಡಲಾಯಿತು.

ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಯು.ಎನ್ ಇಬ್ರಾಹಿಮ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯದರ್ಶಿ ಅಲ್ತಾಪ್ ಯು.ಚ್, ಮಸ್ಜಿದುಲ್ ಕರೀಮ್ ಇದರ ನೂತನ ಉಪಾಧ್ಯಕ್ಷ ಝೈನುದ್ದೀನ್ ಎಮ್. ಸಂಚಾಲಕ ಇಬ್ರಾಹಿಮ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಳ್ಳಾಲ ವಲಯ ಮೇಲ್ವಿಚಾರಕಿ ಜಯಂತಿ, ಕೃಷಿ ಮೇಲ್ವಿಚಾರಕ ಮೋಹನ್, ಜನಜಾಗೃತಿ ಉಳ್ಳಾಲ ವಲಯ ಅಧ್ಯಕ್ಷ ಪರಮೇಶ್ವರ್,ಉಳ್ಳಾಲ ವಲಯ ಶೌರ್ಯ ವಿಫತ್ತು ನಿರ್ವಹಣಾ ಘಟಕದ ಸದಸ್ಯರಾದ ಶಂಕರ್ ಸಂಕೋಳಿಗೆ, ರಘುವೀರ ಸಂಕೋಳಿಗೆ, ಅಶೋಕ್ ಕ್ಲಿಕ್ ತೊಕ್ಕೋಟ್ಟು, ಸನ್ಮಾ, ಸುಶ್ಮಾ,ಆಶಾ ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಶಶಿಕಲಾ ಕಾರ್ಯಕ್ರಮ ನಿರೂಪಣೆಮಾಡಿದರು. ಸಪ್ನಾ ವಂದಿಸಿದರು. ಶಾಲಾ ಮುಖ್ಯ ಶಿಕ್ಷಕ ಕೆ.ಎಮ್.ಕೆ ಮಂಜನಾಡಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News