ಉಳ್ಳಾಲ: ಸಫರ್ ಸ್ಪೋರ್ಟ್ಸ್ ‍& ಕಲ್ಚರಲ್ ಅಸೋಸಿಯೇಶನ್ ವತಿಯಿಂದ ಸನ್ಮಾನ ಕಾರ್ಯಕ್ರಮ

Update: 2024-06-15 06:15 GMT

ಉಳ್ಳಾಲ: ಸಫರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಮಂಚಿಲ ಪೆರ್ಮನ್ನೂರು ವತಿಯಿಂದ ಪರಿಸರದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮತ್ತು ಕುರ್ ಆನ್ ಪರಿಪೂರ್ಣ ಕಂಠಪಾಠ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಕ್ಲಬ್ ನ ಸಭಾಂಗಣದಲ್ಲಿ ನಡೆಯಿತು.

ಸಫರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಮಂಚಿಲ ಪೆರ್ಮನ್ನೂರು ಇದರ ಅಧ್ಯಕ್ಷ ನಝೀರ್ ಹುಸೈನ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ‌, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಅತೀ ಹೆಚ್ಚು ಅಂಕ ಪಡೆದು ಸಮಾಜಕ್ಕೆ, ಊರಿಗೆ ತಂದೆತಾಯಂದರಿಗೆ ಹೆಸರು ತರಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಹಾಫಿಳ್ ಮುಹಮ್ಮದ್ ಮುಸ್ತಫ ನಕೀಲ್, ಇಹಾಬ್ ಇಬ್ರಾಹಿಮ್, ಫಾತಿಮ ರಿಯಾ ಅಂಶುದ,ನಿಶ್ಮಾ ಮರಿಯಮ್, ಆಯಿಷಾ ಅಸ್ಮಿಯಾರನ್ನು ಸನ್ಮಾನಿಸಲಾಯಿತು.

ಕಾರ್ಯದರ್ಶಿ ಮುಸ್ತಫ ಅಬ್ದುಲ್ಲ ಪ್ರಾಸ್ತವಿಕವಾಗಿ ಮಾತನಾಡಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಲಹೆಗಾರ ರಹ್ಮಾನ್ ಸಾಂದರ್ಭಿಕವಾಗಿ ಮಾತನಾಡಿದರು.

ಮಾಜಿ ಅಧ್ಯಕ್ಷ ಅಬ್ದುಲ್ ಫತಾಕ್, ಮೆನೇಜರ್ ಯು.ಪಿ. ಖಾದರ್, ಜೊತೆ ಕಾರ್ಯದರ್ಶಿ ಮುನ್ನಾ ಜಾಸಿಮ್, ಸಮಿತಿ ಸದಸ್ಯರಾದ ಇಕ್ಬಾಲ್,ನೌಶಾದ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News