ವಖ್ಫ್ ವಿಚಾರ: ಸ್ಪೀಕರ್ ಯು.ಟಿ. ಖಾದರ್ ರನ್ನು ಭೇಟಿಯಾದ ಮುಸ್ಲಿಮ್ ವಾಯ್ಸ್ ಫೊರ್ ಜಸ್ಟಿಸ್ ತಂಡ

Update: 2024-09-01 08:26 GMT

ಮಂಗಳೂರು : ವಕ್ಫ್ ಆಸ್ತಿ ಸಂರಕ್ಷಣೆ ಮತ್ತು ವಕ್ಫ್ ಸ್ಥಿರಾಸ್ತಿ ಅಕ್ರಮ ಒತ್ತುವರಿಯ ಬಗ್ಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡನೆಯಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಚರ್ಚೆ ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಮ್ ವಾಯ್ಸ್ ಪೋರ್ ಜಸ್ಟಿಸ್ ತಂಡವು ಕರ್ನಾಟಕ ರಾಜ್ಯ ವಿಧಾನಸಭಾ ಅಧ್ಯಕ್ಷ ಯು. ಟಿ ಖಾದರ್ ರವರನ್ನು ಭೇಟಿ ಮಾಡಿತು.

ದೇಶದಲ್ಲಿ ವಕ್ಫ್ ಆಸ್ತಿಯ ಬಗ್ಗೆ ನಡೆಯುತ್ತಿರುವ ವಿದ್ಯಮಾನ ಮತ್ತು ರಾಜ್ಯದಲ್ಲಿ ವಕ್ಫ್ ಸಂಬಂಧಿಸಿದ ಅಸ್ತಿಯಿಂದಾಗಿ ಸಮುದಾಯಕ್ಕೆ ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಉದ್ಯೋಗ ಸೃಷ್ಟಿಯಂತಹ ಅವಕಾಶಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿ, ವಕ್ಫ್ ಆಸ್ತಿಗೆ ಸಂಬಂಧಿಸಿದ ವರದಿಯ ಜ್ಞಾಪಕ ಪತ್ರವನ್ನು ನೀಡಲಾಯಿತು. 

ಈ ಸಂದರ್ಭದಲ್ಲಿ ರಫೀಉದ್ದೀನ್ ಕುದ್ರೋಳಿ, ಮುಸ್ಲಿಮ್ ವಾಯ್ಸ್ ಫೊರ್ ಜಸ್ಟಿಸ್ ತಂಡದ ಸದಸ್ಯರಾದ ವಹಾಬ್ ಕುದ್ರೋಳಿ, ರಿಝ್ವಾನ್ ಸಜೀಪ, ಸಲಾಂ ಉಚ್ಚಿಲ್, ರಫೀಕ್ ಪರ್ಲಿಯ, ಹುಸೈನ್ ಮದನಿ ನಗರ, ಫಾರೂಕ್ ಸೋಶಿಯಲ್ ಹಾಗೂ ಮುಸ್ತಫಾ ಉಳ್ಳಾಲ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News