ಬಿಹಾರದಲ್ಲಿ ಕುಸಿದ ಇನ್ನೊಂದು ಸೇತುವೆ; 15 ದಿನಗಳ ಅವಧಿಯಲ್ಲಿ 7ನೇ ಘಟನೆ
Update: 2024-07-03 10:42 GMT
ಪಾಟ್ನಾ: ಬಿಹಾರದ ಸಿವನ್ ಜಿಲ್ಲೆಯಲ್ಲಿ ಗಂಡಕಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯ ಒಂದು ಭಾಗ ಇಂದು ಬೆಳಿಗ್ಗೆ ಕುಸಿದಿದೆ. ಕಳೆದ 15 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಇಂತಹ ಏಳನೇ ಘಟನೆ ಇದಾಗಿದೆ.
ಈ ಸಣ್ಣ ಸೇತುವೆ ದಿಯೋರಿಯಾ ಬ್ಲಾಕ್‌ನಲ್ಲಿದ್ದು ಮಹಾರಾಜಗಂಜ್‌ನ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸಿವನ್ ಜಿಲ್ಲೆಯಲ್ಲಿ ಕಳೆದ 11 ದಿನಗಳಲ್ಲಿ ಸೇತುವೆ ಕುಸಿತದ ಎರಡನೇ ಘಟನೆ ಇದಾಗಿದೆ.
ಇಂದು ಬೆಳಿಗ್ಗೆ ಸುಮಾರು 5 ಗಂಟೆಗೆ ಸೇತುವೆಯ ಒಂದು ಭಾಗ ಕುಸಿದಿದೆ. ಈ ಸೇತುವೆಯನ್ನು 1982-83ರಲ್ಲಿ ನಿಮಿಸಲಾಗಿತ್ತು. ಕಳೆದ ಕೆಲ ದಿನಗಳಿಂದ ದುರಸ್ತಿ ಕಾರ್ಯ ನಡೆಯುತ್ತಿದೆ.
ಈ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಸೇತುವೆ ಶಿಥಿಲಗೊಂಡಿರಬಹುದೆಂದು ಸ್ಥಳೀಯರು ಹೇಳುತ್ತಾರೆ. ಹನ್ನೊಂದು ದಿನಗಳ ಹಿಂದೆ, ಜೂನ್ 22ರಂದು ದರೌಂದ ಪ್ರದೇಶದಲ್ಲಿ ಇರುವ ಸೇತುವೆಯ ಒಂದು ಭಾಗ ಕುಸಿದಿತ್ತು.