ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡಿನ 13 ಬೆಸ್ತರ ಬಂಧನ
Update: 2023-07-09 17:08 GMT
ರಾಮೇಶ್ವರಂ: ಶ್ರೀಲಂಕಾದ ಸಮುದ್ರಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ತಮಿಳುನಾಡಿನ ರಾಮೇಶ್ವರಂನ 13 ಮಂದಿ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಶನಿವಾರ ಬಂಧಿಸಿದೆ.
ಸಮುದ್ರ ಪ್ರಕ್ಷುಬ್ಧವಾಗಿದ್ದರಿಂದ ಹಾಗೂ ಪ್ರತಿಕೂಲ ಹವಾಮಾನದ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಸುಮಾರು ಒಂದು ವಾರದಿಂದ ರಾಮೇಶ್ವರಂ ಪ್ರದೇಶದ ಮೀನುಗಾರರು ಕಡಲಿಗಿಳಿದಿರಲಿಲ್ಲ ಆದರೆ ಶನಿವಾರ ಮೀನುಗಾರಿಕೆಗೆ ಅನುಮತಿ ದೊರೆತ ಬಳಿಕ ಸುಮಾರು 400 ಮಂದಿ ಬೆಸ್ತರು ಸಮುದ್ರಕ್ಕೆ ತೆರಳಿದ್ದರು. ಅವರು ಕಾಂಜೆಸ್ ಹಾಗೂ ಕಚ್ಚತೀವು ನಡುವಿನ ಸಮುದ್ರಪ್ರದೇಶದಲ್ಲಿದ್ದಾಗ ಶ್ರೀಲಂಕಾ ನೌಕಪಡೆಯು ಅವರನ್ನುು ಸುತ್ತುವರಿದಿತ್ತು ಹಾಗೂ 13 ಮಂದಿಯನ್ನು ಬಂಧಿಸಿದೆ ಮತ್ತು ಎರಡು ದೋಣಿಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಬಂಧಿತ ಮೀನುಗಾರರನ್ನು ಮಾಯಿಲೆಟ್ಟಿ ಬಂದರಿಗೆ ಕೊಂಡೊಯ್ಯಲಾಗಿದ್ದು, ಅವರನ್ನು ಜಾಫ್ನಾದಲ್ಲಿರುವ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸುವ ನಿರೀಕ್ಷೆಯಿದೆ.