ಅಮೆರಿಕದ ಕಾಲೇಜು ಕ್ಯಾಂಪಸ್‍ಗಳಲ್ಲಿ 21,000 ಫೆಲೆಸ್ತೀನಿ ಪರ ಪ್ರತಿಭಟನಾಕಾರರ ಬಂಧನ

Update: 2024-05-03 12:54 GMT

PC : NDTV 

ಲಾಸ್‍ಎಂಜಲೀಸ್: ಅಮೆರಿಕದಾದ್ಯಂತ ವಿವಿಧ ಕಾಲೇಜು ಕ್ಯಾಂಪಸ್‍ಗಳಲ್ಲಿ ನಡೆಯುತ್ತಿರುವ ಫೆಲೆಸ್ತೀನಿ ಪರ ಹೋರಾಟಗಲ್ಲಿ ಭಾಗವಹಿಸಿದ 21 ಸಾವಿರ ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೆಲವೆಡೆ ಪ್ರತಿಭಟನಾ ಟೆಂಟ್‍ಗಳು ಮತ್ತು ವಶಪಡಿಸಿಕೊಂಡ ಕಟ್ಟಡಗಳನ್ನು ತೆರವುಗೊಳಿಸಲು ಬಲಪ್ರಯೋಗ ನಡೆದಿದೆ.

ಕೊಲಂಬಿಯಾ ವಿಶ್ವವಿದ್ಯಾನಿಲಯ ಆಡಳಿತ ಕಟ್ಟಡದಲ್ಲಿ ಪ್ರತಿಭಟನಾಕಾರರನ್ನು ತೆರವುಗೊಳಿಸುವ ವೇಳೆ ಅಧಿಕಾರಿಯೊಬ್ಬರು ಗುಂಡು ಹಾರಿಸಿದ್ದಾರೆ ಎಂದು ಅಭಿಯೋಜಕರ ಕಚೇರಿ ಸ್ಪಷ್ಟಪಡಿಸಿದೆ.

ಕೊಲಂಬಿಯಾ ಕ್ಯಾಂಪಸ್‍ನ ಹ್ಯಾಮಿಲ್ಟನ್ ಹಾಲ್‍ನಲ್ಲಿ ಮಂಗಳವಾರ ರಾತ್ರಿ ನಡೆದ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಜಿಲ್ಲಾ ಅಭಿಯೋಜಕರ ವಕ್ತಾರ ದೌಗ್ ಕೊಹೇನ್ ಹೇಳಿದ್ದಾರೆ.

ಕೊಲಂಬಿಯಾ ದಾಳಿಯಲ್ಲಿ 100ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಎಪ್ರಿಲ್ 18ರ ಬಳಿಕ ವಿವಿಧೆಡೆ ಕ್ಯಾಂಪಸ್‍ಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಪೈಕಿ ಕನಿರ್ಷಠ 40 ಕಡೆಗಳಲ್ಲಿ ತಲಾ 50 ಮಂದಿಯನ್ನು ಬಂಧಿಸಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News