ಅಯೋಧ್ಯೆ ರಾಮ ಮಂದಿರದ 20 ಅರ್ಚಕ ಹುದ್ದೆಗೆ 3 ಸಾವಿರ ಅರ್ಜಿ

Update: 2023-11-21 04:30 GMT

Photo: PTI

ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದ ಪುನರ್ ಪ್ರತಿಷ್ಠಾ ಕಾರ್ಯಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ದೇವಾಲಯಕ್ಕೆ ಅರ್ಚಕರ ನೇಮಕಾತಿಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅರ್ಜಿಗಳನ್ನು ಅಹ್ವಾನಿಸಿದೆ. ರಾಮನ ಮೂರ್ತಿ ಪ್ರತಿಷ್ಠೆ ಬಳಿಕ ಈ ಭವ್ಯ ದೇಗುಲ ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ.

ಟ್ರಸ್ಟ್ ನೀಡಿರುವ ಜಾಹೀರಾತಿನ ಪ್ರಕಾರ 20 ಅರ್ಚಕ ಹುದ್ದೆಗಳು ಖಾಲಿ ಇವೆ. ಇದಕ್ಕೆ 3000 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 200 ಮಂದಿಯ ಪಟ್ಟಿಯನ್ನು ಸಂದರ್ಶನಕ್ಕೆ ಸಿದ್ಧಪಡಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಕರಸೇವಕಪುರಂನಲ್ಲಿ ಸಂದರ್ಶನ ನಡೆಯುತ್ತಿದ್ದು, ವೃಂದಾವನದ ಪ್ರಖ್ಯಾತ ವಾಗ್ಮಿ ಜಯಕಾಂತ್ ಮಿಶ್ರಾ, ಮಿತಿಲಶ್ ನಂದಿನಿ ಶರಣ್ ಮತ್ತು ಸತ್ಯನಾರಾಯಣ ದಾಸ್ ಅವರನ್ನೊಳಗೊಂಡ ಆಯ್ಕೆ ಸಮಿತಿ ಇದನ್ನು ನಿರ್ವಹಿಸುತ್ತಿದೆ. ಆರು ತಿಂಗಳ ಸನಿವಾಸ ತರಬೇತಿಯ ಬಳಿಕ ಇವರನ್ನು ರಾಮಜನ್ಮಭೂಮಿ ಸಂಕೀರ್ಣದ ವಿವಿಧೆಡೆಗಳಲ್ಲಿ ನಿಯುಕ್ತಿಗೊಳಿಸಲಾಗುತ್ತದೆ.

200 ಮಂದಿಯಲ್ಲಿ ಅನುತ್ತೀರ್ಣರಾದ 180 ಅಭ್ಯರ್ಥಿಗಳಿಗೆ ತರಬೇತಿಯಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ಅವರಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ಭವಿಷ್ಯದಲ್ಲಿ ಸೃಷ್ಟಿಯಾಗುವ ಖಾಲಿ ಹುದ್ದೆಗಳಿಗೆ ಇವರನ್ನು ಪರಿಗಣಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News